masthmagaa.com:
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 92,605 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು 1,133 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 54 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 86,752 ಆಗಿದೆ.
ಕಳೆದ 24 ಗಂಟೆಗಳಲ್ಲಿ ದಾಖಲೆಯ 94,000+ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 43.03 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10.10 ಲಕ್ಷ ಆಗಿದೆ. ಅಂದ್ರೆ ಇಷ್ಟು ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಅರ್ಥ.
ಭಾರತದಲ್ಲಿ ಗುಣಮುಖ ಪ್ರಮಾಣ 79.68% ಇದ್ದು, ಸಾವಿನ ಪ್ರಮಾಣ 1.60%ಗೆ ಇಳಿಕೆಯಾಗಿದೆ. ಸೆಪ್ಟೆಂಬರ್ 19ರಂದು 12.06 ಲಕ್ಷ ಸ್ಯಾಂಪಲ್ಗಳನ್ನ ಪರೀಕ್ಷಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು 6.36 ಕೋಟಿ ಸ್ಯಾಂಪಲ್ಗಳನ್ನ ಪರೀಕ್ಷಿಸಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.
1. ಮಹಾರಾಷ್ಟ್ರ: 2.97+ ಲಕ್ಷ ಪ್ರಕರಣ (32,000+ ಸಾವು)
2. ಕರ್ನಾಟಕ: 98,000+ ಪ್ರಕರಣ (7,800+ ಸಾವು)
3. ಆಂಧ್ರಪ್ರದೇಶ: 81,000+ ಪ್ರಕರಣ (5,300+ ಸಾವು)
4. ಉತ್ತರಪ್ರದೇಶ: 66,000+ ಪ್ರಕರಣ (4,900+ ಸಾವು)
5. ತಮಿಳುನಾಡು: 46,000+ ಪ್ರಕರಣ (8,700+ ಸಾವು)
6. ಚತ್ತೀಸ್ಗಢ: 37,000+ ಪ್ರಕರಣ (664 ಸಾವು)
7. ಕೇರಳ: 37,000+ ಪ್ರಕರಣ (519 ಸಾವು)
8. ಒಡಿಶಾ: 33,000+ ಪ್ರಕರಣ (691 ಸಾವು)
9. ದೆಹಲಿ: 32,000+ ಪ್ರಕರಣ (4,900+ ಸಾವು)
10. ತೆಲಂಗಾಣ: 30,000+ ಪ್ರಕರಣ (1,000+ ಸಾವು)
-masthmagaa.com
Contact Us for Advertisement