masthmagaa.com:

ಕೊರೋನಾ ಮಹಾಮಾರಿಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ ಶತಕದ ಗಡಿ ದಾಟಿದ್ದು 109ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಕೇವಲ 12 ಗಂಟೆ ಅವಧಿಯಲ್ಲಿ ಸೋಂಕಿತರ ಸಂಖ್ಯೆ 490ರಷ್ಟು ಏರಿಕೆ ಕಂಡಿದ್ದು 4,067ಕ್ಕೆ ಬಂದು ನಿಂತಿದೆ. ಈ ಪೈಕಿ 292 ಮಂದಿ ಗುಣಮುಖರಾಗಿದ್ದಾರೆ ಅಥವಾ ಡಿಸ್ಚಾರ್ಜ್ ಆಗಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರೋ ಮಹಾರಾಷ್ಟ್ರದಲ್ಲಿ. ಇಲ್ಲಿ ಇದುವರೆಗೆ ಬರೋಬ್ಬರಿ 45 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ 690 ಜನರಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಗುಜರಾತ್​ನಲ್ಲಿ 11, ಮಧ್ಯಪ್ರದೇಶದಲ್ಲಿ 9, ದೆಹಲಿಯಲ್ಲಿ 7, ತೆಲಂಗಾಣದಲ್ಲಿ 7, ಪಂಜಾಬ್ 6, ತಮಿಳುನಾಡು 5, ಕರ್ನಾಟಕದಲ್ಲಿ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply