masthmagaa.com:

ಇಸ್ರೇಲ್​ನಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಎದ್ದಿರುವ ಹಿನ್ನೆಲೆ ದೇಶಾದ್ಯಂತ ಮತ್ತೊಮ್ಮೆ ಲಾಕ್​ಡೌನ್ ಹೇರಲಾಗುವುದು ಅಂತ ಪ್ರಧಾನಿ ಬೆಂಜಮಿನ್ ನೇತನ್ಯಾಹು ಘೋಷಿಸಿದ್ದಾರೆ. ಶುಕ್ರವಾರದಿಂದ ಲಾಕ್​ಡೌನ್​ ಜಾರಿಯಾಗಲಿದೆ. ಈ ಅವಧಿಯಲ್ಲಿ ಶಾಲಾ-ಕಾಲೇಜು, ಹೋಟೆಲ್, ರೆಸ್ಟೊರೆಂಟ್, ಮಾಲ್​ ಸೇರಿದಂತೆ ಬಹುತೇಕ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಆಗಲಿದೆ. ವಾಹನ ಸಂಚಾರದ ಮೇಲೂ ನಿರ್ಬಂಧ ಬೀಳಲಿದೆ.

ಈ ಲಾಕ್​ಡೌನ್ ಕನಿಷ್ಠ ಮೂರು ವಾರಗಳ ಕಾಲ ಇರಲಿದೆ. ಆದ್ರೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣವನ್ನು ನೋಡಿಕೊಂಡು ಲಾಕ್​ಡೌನ್ ನಿರ್ಬಂಧಗಳನ್ನು ಸಡಿಲ ಮಾಡಲಾಗುತ್ತದೆ. ಇಸ್ರೇಲ್​ನಲ್ಲಿ ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದುವರೆಗೆ ಒಟ್ಟು 1,55,000 ಜನರಿಗೆ ಸೋಂಕು ತಗುಲಿದ್ದು, ಸಾವಿರಕ್ಕೂ ಅಧಿಕ ಸೋಂಕಿತರು ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply