ಇಟಲಿಯಲ್ಲಿ ಒಂದೇ ದಿನ 345 ಜನ ಸಾವು.. ಚೀನಾಗಿಂತಲೂ ಕೆಟ್ಟ ಪರಿಸ್ಥಿತಿ

masthmagaa.com:

ಕೊರೋನಾ ವೈರಸ್​ಗೆ ನಲುಗಿರೋ ಇಟಲಿಯಲ್ಲಿ ಪರಿಸ್ಥಿತಿ ಮಿತಿಮೀರಿದೆ. ದೇಶಾದ್ಯಂತ ಲಾಕ್​ಡೌನ್​ ಹೇರಿದ್ರೂ ನಿನ್ನೆ ಒಂದೇ ದಿನ 345 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಕೊರೋನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 2,503ಕ್ಕೆ ಏರಿಕೆಯಾಗಿದೆ. ಅಲ್ಲದೆ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 27 ಸಾವಿರದಿಂದ 31 ಸಾವಿರಕ್ಕೆ ಏರಿಕೆ ಕಂಡಿದೆ. ಹೀಗಾಗಿ ವೈದ್ಯರ ಕೊರತೆ ಉಂಟಾಗಿದ್ದು ಮೆಡಿಕಲ್ ಪರೀಕ್ಷೆಗಳನ್ನ ರದ್ದು ಮಾಡಿ, 10,000  ವಿದ್ಯಾರ್ಥಿಗಳನ್ನ ಸೇವೆಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕಳೆದ ಡಿಸೆಂಬರ್​ನಲ್ಲಿ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಹಾವಳಿ ಚೀನಾದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಮಂಗಳವಾರ 13 ಹೊಸ ಪ್ರಕರಣಗಳು ದೃಢಪಟ್ಟಿದ್ದು, 11 ಜನ ಮೃತಪಟ್ಟಿದ್ದಾರೆ. ಈ ಮೂಲಕ ಕೊರೋನಾ ವೈರಸ್​ಗೆ ಚೀನಾದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 3,242ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply