ಪುಲ್ವಾಮಾ ದಾಳಿಗೆ ಉಗ್ರರು ಖರ್ಚು ಮಾಡಿದ್ದೆಷ್ಟು ಗೊತ್ತಾ..?

masthmagaa.com:

ದೆಹಲಿ: ಪುಲ್ವಾಮಾದಲ್ಲಿ ನಡೆದ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಭಾರತ- ಪಾಕ್ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟುಹೋಯ್ತು.. ಭಾರತ ಏರ್​ಸ್ಟ್ರೈಕ್ ಮಾಡಿ ಎರಡು ದೇಶಗಳ ನಡುವೆ ಒಂದು ರೀತಿಯ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.. ಆದ್ರೆ ಪಾಪಿ ಉಗ್ರರು ಇಷ್ಟೆಲ್ಲಾ ಮಾಡೋಕೆ ಖರ್ಚು ಮಾಡಿದ್ದು ಎಷ್ಟು ಗೊತ್ತಾ..? ಕೇವಲ 5.7 ಲಕ್ಷ ರೂಪಾಯಿ.. ಎನ್​ಐಎ ಸಲ್ಲಿಸಿರುವ ಚಾರ್ಜ್​ಶೀಟ್​​ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ದಾಳಿಗೂ ಮುನ್ನ ದಾಳಿಯ ಮಾಸ್ಟರ್​​ಮೈಂಡ್, ಜೈಶ್ ಉಗ್ರ ಮೊಹ್ಮದ್ ಉಮರ್ ಫಾರೂಖ್ ಖಾತೆಗೆ ಪಾಕಿಸ್ತಾನದಿಂದ 5 ಕಂತುಗಳಲ್ಲಿ 10 ಲಕ್ಷ ರೂಪಾಯಿ ಬಂದಿತ್ತು. ಇದರಲ್ಲಿ ದಾಳಿಗೆ 5.7 ಲಕ್ಷ ರೂ. ಬಳಸಿಕೊಳ್ಳಲಾಗಿತ್ತು.

ಮೊದಲಿಗೆ ಉಗ್ರರು 1.85 ಲಕ್ಷ ರೂಪಾಯಿ ಖರ್ಚು ಮಾಡಿ ಮಾರುತಿ ಇಕೋ ಕಾರು ಖರೀದಿಸಿದ್ರು. ನಂತರ 35 ಸಾವಿರ ರೂಪಾಯಿ ಖರ್ಚು ಮಾಡಿ ಸ್ಫೋಟಕಗಳನ್ನು ಸಾಗಿಸಲು ಸಾಧ್ಯವಾಗುವಂತೆ ಮಾರ್ಪಾಡು ಮಡಿದ್ರು. ನಂತರ ಎರಡು ಸ್ಫೋಟಕವನ್ನು ರೆಡಿ ಮಾಡಲು 2.25 ಲಕ್ಷ ರೂಪಾಯಿ ಖರ್ಚು ಮಾಡಿದ್ರು. ಜೊತೆಗೆ ಆನ್​​ಲೈನ್​​ನಲ್ಲಿ ಆರ್ಡರ್ ಮಾಡಿ, 35 ಸಾವಿರ ರೂಪಾಯಿಯ 4 ಕೆಜಿ ಅಲ್ಯೂಮಿನಿಯಂ ತರಿಸಿಕೊಂಡಿದ್ರು.

-masthmagaa.com

Contact Us for Advertisement

Leave a Reply