ಸೋಫಾ ಮೇಲೆ ಕುಳಿತು ಪೋಸ್ ಕೊಟ್ಟ ಜಪಾನ್ ಪ್ರಧಾನಿಗೆ ಜನರ ಕ್ಲಾಸ್..!

masthmagaa.com:

ಜಪಾನ್: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳು ಲಾಕ್​ಡೌನ್ ಹೇರಿದ್ದರೂ ಜಪಾನ್ ಮಾತ್ರ ಇನ್ನೂ ಲಾಕ್​ಡೌನ್ ಹೇರಿಲ್ಲ. ಕೇವಲ ತುರ್ತು ಪರಿಸ್ಥಿತಿ ಹೇರಿ, ಎಲ್ಲರೂ ಮನೆಯಲ್ಲೇ ಇರುವಂತೆ ಪ್ರಧಾನಿ ಶಿಂಜೋ ಅಬೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ತಾವು ಸೋಫಾ ಮೇಲೆ ಕುಳಿತು, ನಾಯಿ ಹಿಡಿದುಕೊಂಡಿರುವ, ಟೀ ಕುಡಿಯುತ್ತಿರುವ, ಪುಸ್ತಕ ಓದುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಆದ್ರೆ ಈ ವಿಡಿಯೋಗೆ ಟ್ವಿಟ್ಟರ್​ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ದೇಶ ಕೊರೋನಾ ವಿರುದ್ಧ ಹೋರಾಡುತ್ತಿರುವ ಈ ಹೊತ್ತಲ್ಲಿ ಈ ರೀತಿ ಐಷಾರಾಮದ ಪ್ರದರ್ಶನದ ಅಗತ್ಯವಿದೆಯಾ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಜೊತೆಗೆ ನೀವು ಯಾರೆಂದು ಭಾವಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply