ಜಿಯೋದಿಂದ ವರ್ಕ್​ ಫ್ರಂ ಹೋಮ್ ಪ್ಲಾನ್​​! 251 ರೂ.ಗೆ 120 ಜಿಬಿ ಡೇಟಾ..

masthmagaa.com:

ದೇಶದಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ವರ್ಕ್​ ಫ್ರಂ ಹೋಮ್ ಅನೌನ್ಸ್ ಮಾಡಿವೆ. ಹೀಗಾಗಿ ಹೆಚ್ಚಿನ ಇಂಟರ್ನೆಟ್ ಬೇಕಾಗುತ್ತೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಎಸ್​ಎನ್​ಎಲ್ ಮತ್ತು ಎಸಿಟಿ ಫೈಬರ್​ನಂತರ ಕಂಪನಿಗಳು ಈಗಾಗಲೇ ವರ್ಕ್​​ ಫ್ರಂ ಹೋಮ್ ಪ್ಲಾನ್ ಅನೌನ್ಸ್ ಮಾಡಿವೆ.

ಈಗ ರಿಲಾಯನ್ಸ್ ಜಿಯೋ ಕೂಡ ವರ್ಕ್​ ಫ್ರಂ ಹೋಂ ಪ್ಲಾನ್ ಅನೌನ್ಸ್ ಮಾಡಿದೆ. ಈ ಮೂಲಕ 251 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡರೆ 60 ದಿನಗಳ ಕಾಲ 2ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್​ನಲ್ಲಿ ಕೇವಲ ಡೇಟಾ ಮಾತ್ರವೇ ಸಿಗಲಿದ್ದು, ಉಚಿತ ಕರೆ ಮತ್ತು ಎಸ್​ಎಂಎಸ್​ ಸೌಲಭ್ಯಗಳು ಇರೋದಿಲ್ಲ. ಈ ಪ್ಲಾನ್​​ನಲ್ಲಿ 120 ಜಿಬಿ ಡೇಟಾ ಸಿಗಲಿದ್ದು, ಪ್ರತಿದಿನ 2 ಜಿಬಿ ಹೈಸ್ಪೀಡ್​​ ಇಂಟರ್​ನೆಟ್ ಸಿಗಲಿದೆ. ನಂತರದಲ್ಲಿ ಇಂಟರ್​ನೆಟ್ ಸ್ಪೀಡ್ ಕಡಿಮೆಯಾಗಲಿದೆ. 2ಜಿಬಿ ಡೇಟಾ ಖಾಲಿಯಾದ ಬಳಿಕ 64 ಕೆಬಿಪಿಎಸ್​​ ವೇಗದಲ್ಲಿ ಇಂಟರ್​ನೆಟ್ ಲಭ್ಯವಾಗಲಿದೆ.

ಜೊತೆಗೆ 4ಜಿ ವೋಚರ್ಸ್​​ಗಳಲ್ಲೂ ಕಂಪನಿ ಬದಲಾವಣೆ ಮಾಡಿದ್ದು, 11 ರೂ., 21 ರೂ., 51 ಮತ್ತು 101 ರೂ. ಪ್ಲಾನ್​​ನಲ್ಲಿ ಡೇಟಾವನ್ನು ಡಬಲ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply