masthamagaa.com:

ಮಹಾರಾಷ್ಟ್ರ ಸರ್ಕಾರ ವಿರುದ್ಧದ ವಾರ್ ಮುಂದುವರಿಸಿರೋ ಬಾಲಿವುಡ್ ನಟಿ ಕಂಗನಾ ರನಾವತ್ ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅಟ್ಯಾಕ್ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ನನಗೆ ಕಿರುಕುಳ ನೀಡುತ್ತಿರುವಾಗ ಒಂದು ಹೆಣ್ಣಾಗಿ ನೀವು ಮೌನವಾಗಿರೋದು ಎಷ್ಟು ಸರಿ ಅಂತ ಕಂಗನಾ ಕಿಡಿಕಾರಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ-ಎನ್​ಸಿಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ.

‘ಮಾನ್ಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ, ನಿಮ್ಮ ಮಹಾರಾಷ್ಟ್ರ ಸರ್ಕಾರ ನನಗೆ ನೀಡಿದ ಕಿರುಕುಳದಿಂದ ಒಂದು ಹೆಣ್ಣಾಗಿ ನಿಮಗೆ ಏನೂ ಅನಿಸಲಿಲ್ವಾ..? ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವಂತೆ ನಿಮ್ಮ ಸರ್ಕಾರಕ್ಕೆ ಸೂಚಿಸಲು ಸಾಧ್ಯವಿಲ್ಲವೇ..?’ ಅಂತ ಪ್ರಶ್ನಿಸಿದ್ದಾರೆ.

ಇದರ ಜೊತೆಗೆ ಸೋನಿಯಾ ಗಾಂಧಿ ಅವರ ಇಟಲಿ ಮೂಲವನ್ನು ಕೆದಕಿದ ಕಂಗನಾ ರನಾವತ್, ‘ನೀವು ವಿದೇಶದಲ್ಲಿ ಬೆಳೆದು ಭಾರತದಲ್ಲಿ ವಾಸಿಸುತ್ತಿದ್ದೀರಿ. ಮಹಿಳೆಯರ ಸಂಘರ್ಷದ ಬಗ್ಗೆ ನಿಮಗೆ ಗೊತ್ತಿರಬಹುದು. ಆದ್ರೆ ನಿಮ್ಮ ಸ್ವಂತ ಸರ್ಕಾರ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವಾಗ, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳು ಮಾಡುತ್ತಿರುವಾಗ ನೀವು ಸುಮ್ಮನಿರೋದು ಮತ್ತು ಉದಾಸೀನತೆ ತೋರಿಸುತ್ತಿರೋದನ್ನು ಇತಿಹಾಸ ಜಡ್ಜ್ ಮಾಡುತ್ತೆ. ನೀವು ಮಧ್ರಪ್ರವೇಶಿಸುತ್ತೀರಿ ಅಂತ ಭಾವಿಸಿದ್ದೇನೆ’ ಅಂತ ಕಂಗನಾ ರನಾವತ್ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply