masthmagaa.com:

ಸ್ಯಾಂಡಲ್​ವುಡ್​ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರಿಗೆ ಕೊರೋನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

‘ನನ್ನ ಪತ್ನಿ ಮತ್ತು ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಸಣ್ಣ ಪ್ರಮಾಣದ ರೋಗ ಲಕ್ಷಣ ಕಾಣಿಸಿಕೊಂಡಿರೋದ್ರಿಂದ ಆಸ್ಪತ್ರೆಗೆ ದಾಖಲಾಗಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗಿ ಬರುವ ವಿಶ್ವಾಸ ನನಗಿದೆ. ನಮ್ಮ ಜೊತೆ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಸುರಕ್ಷಿತವಾಗಿರಿ. ಜೈ ಆಂಜನೇಯ.’ ಅಂತ ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣಾ ಕಳೆದ ವರ್ಷ ನವೆಂಬರ್ 24ರಂದು ಮದುವೆಯಾಗಿದ್ದರು. ಇತ್ತೀಚೆಗೆ ಧ್ರುವ ಸರ್ಜಾ ಅವರ ಸಹೋದರ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಇನ್ನು ಕಳೆದ ವಾರವಷ್ಟೇ ಬಾಲಿವುಡ್​ ನಟ ಬಿಗ್​ಬಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯಗೆ ಕೊರೋನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಇದೀಗ ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾಗೂ ಸೋಂಕು ತಗುಲಿದೆ.

-masthmagaa.com

Contact Us for Advertisement

Leave a Reply