masthmagaa.com:

ಹೃದಯಾಘಾತದಿಂದ ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್‌ ದೇವ್‌ ಡಿಸ್ಚಾರ್ಜ್‌ ಆಗಿದ್ದಾರೆ. 61 ವರ್ಷ ವಯಸ್ಸಿನ ಕಪಿಲ್​ ದೇವ್​ಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ತೀವ್ರ ನಿಗಾ ಘಟದಲ್ಲಿದ್ದ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ ಅಂತ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಪಿಲ್​ ದೇವ್​ ಡಿಸ್ಚಾರ್ಜ್ ಆಗುವ ವೇಳೆ ತೆಗೆದ ಫೋಟೋವನ್ನು ಹಾಕಿದ್ದಾರೆ. ಫೋಟೋದಲ್ಲಿ ಸರ್ಜರಿ ನಡೆಸಿದ ಆಸ್ಪತ್ರೆಯ ವೈದ್ಯರು ಕೂಡ ಇದ್ದಾರೆ.

-masthmagaa.com

Contact Us for Advertisement

Leave a Reply