ರಾಜ್ಯದಲ್ಲಿ ಕೊರೋನಾ ಕಂಟಕ…ಸೋಂಕಿತರ ಸಂಪರ್ಕದಲ್ಲಿದ್ದವರ ಮೇಲೆ ನಿಗಾ

masthmagaa.com:

ಜನರ ನೆಮ್ಮದಿಗೆಡಿಸಿರುವ ಚೀನಾ ಮಹಾಮಾರಿ ಕೊರೋನಾ ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ  ಹೋಗ್ತಿದೆ. ನಿನ್ನೆ ಒಂದೇ ದಿನ ಮೂರು ಕೋರೊನಾ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮಾರ್ಚ್ 13ರಂದು ಸ್ಪೇನ್‌ನ ಮ್ಯಾಡ್ರಿಡ್‌ನಿಂದ ಬಂದ 25 ವರ್ಷದ ಟೆಕ್ಕಿಯಲ್ಲಿ ಮಾರಕ ವೈರಸ್ ಪತ್ತೆಯಾಗಿದೆ. ಈತನ ಸಂಪರ್ಕದಲ್ಲಿದ್ದ 7 ಮಂದಿಯನ್ನ ಗೃಹಬಂಧನದಲ್ಲಿ ಇರಿಸಲಾಗಿದೆ. ಇನ್ನು ಅಮೆರಿಕಾದಿಂದ ಮಾರ್ಚ್ 6ರಂದು ಬಂದ 56 ವರ್ಷದ ಬೆಂಗಳೂರು ಮೂಲದ ಮಹಿಳೆ, ಮಾರ್ಚ್ 16 ರಂದು ಬಂದ 35 ವರ್ಷದ ಟೆಕ್ಕಿಯಲ್ಲೂ ಸೋಂಕು ಪತ್ತೆಯಾಗಿದೆ. ಈತನ ಸಂಪರ್ಕಕಕ್ಕೆ ಬಂದಿರುವವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. 56 ವರ್ಷದ ಮಹಿಳೆ 50 ಜನರೊಂದಿಗೆ ಸಂಪರ್ಕ ಹೊಂದಿದಿದ್ದಾಗಿ ತಿಳಿದು ಬಂದಿದ್ದು, ಅವರಿಗೂ ಗೃಹಬಂಧನ ವಿಧಿಸಲಾಗಿದೆ. ಇಲ್ಲಿವರೆಗೂ ವಿದೇಶದಿಂದ ಬಂದವರಿಂದಲೇ ಚೀನಾ ಕಾಯಿಲೆ ಹರಡ್ತಿದ್ದು, ಕರುನಾಡಿನ ಜನ ಭಯಭೀತರಾಗಿದ್ದಾರೆ.

-masthmagaa.com

Contact Us for Advertisement

Leave a Reply