ಮೈಸೂರಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ! ಒಂದೇ ದಿನ ನಾಲ್ವರಿಗೆ ಕೊರೋನಾ

masthmagaa.com:

ಮೈಸೂರು: ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಮೈಸೂರು ಜಿಲ್ಲೆಯೊಂದರಲ್ಲೇ ಇಂದು ಒಂದೇ ದಿನ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಮೈಸೂರಿನಲ್ಲಿ ಈವರೆಗೆ 12 ಮಂದಿಗೆ ಸೋಂಕು ಪತ್ತೆಯಾಗಿದೆ. ಇವರ ಪೈಕಿ ನಂಜನಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತ ಕಾರ್ಮಿಕನಿಂದ 9 ಮಂದಿ ಕಾರ್ಮಿಕರಿಗೆ ಸೋಂಕು ಹರಡಿದೆ. ಒಟ್ಟು 12 ಮಂದಿ ಸೋಂಕಿತರಲ್ಲಿ 10 ಮಂದಿ ಕಾರ್ಮಿಕರೇ ಆಗಿದ್ದು, ಇನ್ನಿಬ್ಬರು ಹೊರದೇಶದಿಂದ ಬಂದವರಾಗಿದ್ದಾರೆ ಅಂತ ಮಾಹಿತಿ ನೀಡಿದ್ರು.

-masthmagaa.com

Contact Us for Advertisement

Leave a Reply