ಕರ್ನಾಟಕದಲ್ಲಿ ಕೊರೋನಾಗೆ 4ನೇ ಬಲಿ..ಬಾಗಲಕೋಟೆ ಮೂಲದ ಸೋಂಕಿತ ಸಾವು

masthmagaa.com:

ಬಾಗಲಕೋಟೆಯಲ್ಲಿ ಪತ್ತೆಯಾದ ಮೊದಲ ಕೊರೋನಾ ರೋಗಿ ಮೃತಪಟ್ಟಿದ್ದು, ಕರ್ನಾಟಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕನಾಗಿದ್ದ 75 ವರ್ಷದ  ವೃದ್ದನಿಗೆ ಗುರುವಾರವಷ್ಟೇ ಕೊರೋನಾ ದೃಢಪಟ್ಟಿತ್ತು. ಮಾರ್ಚ್ 31ರಂದು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ವರದಿ ಬಂದ ಮರು ದಿನವೇ ವೃದ್ಧ ಕೊರೋನಾಗೆ ಬಲಿಯಾಗಿದ್ದಾರೆ.

ಈ ವೃದ್ಧನ ಸಾವು ಇಡೀ ರಾಜ್ಯವನ್ನು ಆತಂಕಕ್ಕೆ ದೂಡಿದೆ. ಯಾಕಂದ್ರೆ, ಈ ವೃದ್ಧ ವಿದೇಶ, ಹೊರರಾಜ್ಯ, ಹೊರಜಿಲ್ಲೆ ಹೀಗೆ ಎಲ್ಲಿಯೂ ಪ್ರವಾಸ ಮಾಡಿರಲಿಲ್ಲ. ವೃದ್ಧನ ಮಗ, ಮಗಳು 10 ದಿನದ ಹಿಂದೆ ಬೆಂಗಳೂರಿನಿಂದ ಬಂದಿದ್ದರು. ವೃದ್ದನಿಗೆ ಕೊರೋನಾ ದೃಢವಾಗ್ತಿದ್ದರಿಂದ ಮಗ, ಮಗಳು ಹಾಗೂ ಕುಟುಂಬದವರ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಇವರೆಲ್ಲರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ವೃದ್ಧನ ಸಾವು ಆತಂಕ ಮೂಡಿಸುತ್ತಿದೆ.

ತಡರಾತ್ರಿಯೇ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ, ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಮೃತ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮೊದಲಿಗೆ ಕಲಬುರಗಿ, ಚಿಕ್ಕಬಳ್ಳಾಪುರ, ತುಮಕೂರು, ಈಗ ಬಾಗಲಕೋಟೆ ಒಟ್ಟು ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply