ಕರ್ನಾಟಕದಲ್ಲಿ 408 ಮಂದಿಗೆ ಸೋಂಕು..! ಯಾವ ಜಿಲ್ಲೆಯಲ್ಲಿ ಎಷ್ಟು..?

masthmagaa.com:

ರಾಜ್ಯದಲ್ಲಿ ಲಾಕ್​ಡೌನ್​ ನಡುವೆಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೆ 18 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 11 ಮಂದಿ ವಿಜಯಪುರದವರೇ ಆಗಿರೋದು ಆತಂಕಕಾರಿ ವಿಚಾರವಾಗಿದೆ. ಇನ್ನು ಕಲಬುರಗಿಯಲ್ಲೂ ಐವರಲ್ಲಿ ಸೋಂಕು ಪತ್ತೆಯಾಗಿದೆ. ಬೀದರ್ ಮತ್ತು ಗದಗದಲ್ಲಿ ತಲಾ ಒಬ್ಬೊಬ್ಬರಲ್ಲಿ ಸೋಂಕು ದೃಢವಾಗಿದೆ. ಇದ್ರ ಜೊತೆಗೆ ಸಮಾಧಾನದ ವಿಚಾರ ಅಂದ್ರೆ ರಾಜ್ಯದಲ್ಲಿ ಈ ಸೋಂಕಿನ ಹಾಟ್​ಸ್ಪಾಟ್​ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ಇವತ್ತು ಒಂದೂ ಪ್ರಕರಣ ಪತ್ತೆಯಾಗಿಲ್ಲ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮಂದಿಗೆ ಸೋಂಕು..? 

ಬೆಂಗಳೂರು ನಗರ: 89 (4 ಸಾವು)
ಮೈಸೂರು: 84
ಬೆಳಗಾವಿ: 42  (1 ಸಾವು)
ವಿಜಯಪುರ: 32  (2 ಸಾವು)
ಕಲಬುರಗಿ: 27  (3 ಸಾವು)
ಬಾಗಲಕೋಟೆ: 21  (1 ಸಾವು)
ಚಿಕ್ಕಬಳ್ಳಾಪುರ: 16  (2 ಸಾವು)
ಬೀದರ್: 15
ದಕ್ಷಿಣ ಕನ್ನಡ: 14  (1)
ಬಳ್ಳಾರಿ: 13
ಬೆಂಗಳೂರು ಗ್ರಾಮಾಂತರ: 12
ಮಂಡ್ಯ: 12
ಉತ್ತರ ಕನ್ನಡ: 11
ಧಾರವಾಡ: 7
ಗದಗ: 4 (1 ಸಾವು)
ಉಡುಪಿ: 3
ದಾವಣಗೆರೆ: 2
ತುಮಕೂರು: 2, (1 ಸಾವು)
ಚಿತ್ರದುರ್ಗ: 1
ಕೊಡಗು: 1

-masthmagaa.com

Contact Us for Advertisement

Leave a Reply