ಗಡಿಯಲ್ಲಿ ಮತ್ತೆ ಭಾರತ-ಚೀನಾ ಘರ್ಷಣೆ..! ನಡೆಯುತ್ತಾ ಯುದ್ಧ..?

masthmagaa.com:

ದೆಹಲಿ: ಭಾರತ-ಚೀನಾ ಯೋಧರ ನಡುವೆ ಮತ್ತೆ ಗಡಿಯಲ್ಲಿ ಘರ್ಷಣೆ ಸಂಭವಿಸಿದೆ. ಚೀನಾ ಸೈನಿಕರು ಯಥಾಸ್ಥಿತಿಯನ್ನು ಬದಲಿಸಲು ಮಿಲಿಟರಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಪಂಗಾಂಗ್ ತ್ಸೋ ಸರೋವರದ ಬಳಿ ಶನಿವಾರ ರಾತ್ರಿ ಚೀನೀ ಸೈನಿಕರು ಗಡಿ ನುಸುಳಲು ಯತ್ನಿಸಿದ್ದು, ಭಾರತೀಯ ಯೋಧರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚೀನಾ ಪೂರ್ವ ಲಡಾಕ್​​ನಲ್ಲಿ ಸಂಘರ್ಷ ಸಂಭವಿಸಿದ್ದ ವೇಳೆ ಮಾಡಿಕೊಂಡಿದ್ದ ಮಿಲಿಟರಿ ಮತ್ತು ರಾಜತಾಂತ್ರಿಕ ಒಪ್ಪಂದಗಳನ್ನು ಮುರಿದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಇಲಾಖೆ, ಚೀನಾ ಸೇನೆ ಯಥಾಸ್ಥಿತಿಯನ್ನು ಬದಲಿಸಲು ಯತ್ನಿಸಿದೆ. ಆದ್ರೆ ಭಾರತೀಯ ಸೇನೆಗೆ ಈ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿದ್ದರಿಂದ ಅವರ ಪ್ರಯತ್ನವನ್ನು ವಿಫಲಗೊಳಿಸಿದೆ. ಭಾರತ ಮಾತುಕತೆ ಮೂಲಕ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಬದ್ಧವಾಗಿದೆ. ಆದ್ರೆ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಕೂಡ ಅಷ್ಟೇ ಬದ್ಧವಾಗಿದೆ ಅಂತ ತಿಳಿಸಿದೆ. ಜೊತೆಗೆ ಎರಡೂ ದೇಶಗಳ ನಡುವಿನ ಸೇನೆಯ ವಿವಾದವನ್ನು ಬಗೆಹರಿಸಲು ಚುಶುಲ್​​​ನಲ್ಲಿ ಬ್ರಿಗೇಡಿಯರ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುತ್ತಿದೆ ಅಂತ ಮಾಹಿತಿ ನೀಡಿದೆ.

ನಿನ್ನೆಯಷ್ಟೇ ಚೀನಾ ಸೇನೆ ಗಡಿಭಾಗದಲ್ಲಿ ಕ್ಷಿಪಣಿ ಕೇಂದ್ರಗಳನ್ನು ನಿರ್ಮಾಣ ಮಾಡ್ತಿದೆ ಅನ್ನೋದು ಉಪಗ್ರಹ ಚಿತ್ರಗಳ ಮೂಲಕ ಬಯಲಾಗಿತ್ತು. ಇದ್ರ ಬೆನ್ನಲ್ಲೇ ಭಾರತ ರಷ್ಯಾದಲ್ಲಿ ನಡೆಯಲಿರುವ ಸೇನಾ ಕವಾಯತಿಯಲ್ಲಿ ಭಾಗಿಯಾಗದಿರಲು ನಿರ್ಧರಿಸಿತ್ತು. ಇದ್ನೆಲ್ಲಾ ನೋಡ್ತಿದೆ ಗಡಿಯಲ್ಲಿ ಮತ್ತೆ ಯುದ್ಧದ ವಾತಾವರಣ ಸೃಷ್ಟಿಯಾಗ್ತಿದ್ಯಾ ಅನ್ನೋ ಅನುಮಾನ ಮೂಡಿದೆ.

-masthmagaa.com

Contact Us for Advertisement

Leave a Reply