masthmagaa.com:

ರಾಜ್ಯದಲ್ಲಿ ನವೆಂಬರ್​ 17ರಿಂದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳು ಆರಂಭವಾಗಲಿದೆ ಅಂತ ಸರ್ಕಾರವೇ ಹೇಳಿದೆ. ಆದ್ರೆ ಶಾಲೆಗಳನ್ನ ಯಾವಾಗ ತೆರೀತಾರೆ ಅನ್ನೋ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಶಾಲೆಗಳ ಪುನಾರಂಭವನ್ನ ಡಿಸೆಂಬರ್​ವರೆಗೂ ಮುಂದೂಡುವ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಇದಕ್ಕೆ ಕಾರಣ ಬೇರೆ ಬೇರೆ ರಾಜ್ಯಗಳಲ್ಲಿ ಶಾಲೆಗಳನ್ನ ತೆರೆದ ಎರಡ್ಮೂರು ದಿನದಲ್ಲೇ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಪ್ರಮುಖವಾಗಿ ಆಂಧ್ರದಲ್ಲಿ. ಹೀಗಾಗಿ ನಮ್ಮ ರಾಜ್ಯದಲ್ಲೂ ಶಾಲೆಗಳನ್ನ ಸದ್ಯಕ್ಕೆ ತೆರೆಯೋದು ಅನುಮಾನ ಎನ್ನಲಾಗ್ತಿದೆ. ಮಹಾರಾಷ್ಟ್ರದಲ್ಲಿ ದೀಪಾವಳಿ ಬಳಿಕ ಶಾಲೆಗಳನ್ನ ತೆರೆಯಲಾಗುತ್ತೆ ಅಂತ ಅಲ್ಲಿನ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply