ಜಿಮ್​ ಬಂದ್​: ಮನೆಯಲ್ಲೇ ವರ್ಕೌಟ್​ ಮೊರೆಹೋದ ಕತ್ರಿನಾ ಕೈಫ್​​..!

masthmagaa.com:

ಬಾಲಿವುಡ್​ ನಟಿ ಕತ್ರಿನಾ ಕೈಫ್ ಫಿಟ್ನೆಸ್ ಹಾಗೂ ವರ್ಕೌಟ್ ಅನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣ್ತಿದೆ. ಯಾಕಂದ್ರೆ ದೇಶದೆಲ್ಲೆಡೆ ಕೊರೋನಾ ಭೀತಿ ಹಿನ್ನೆಲೆ ಜಿಮ್​ಗಳನ್ನ ಬಂದ್ ಮಾಡಿರೋದ್ರಿಂದ ಮನೆಯಲ್ಲೇ ವರ್ಕೌಟ್​ಗೆ ಮುಂದಾಗಿದ್ದಾರೆ. ಜೊತೆಗೆ ತಮ್ಮ ಫಿಟ್ನೆಸ್ ಇನ್ಸ್​ಟ್ರಕ್ಟರ್ ಯಾಸ್ಮಿನ್​ ಎಂಬುವರ ಜೊತೆ ಮಾಡಿದ ಹಲವು ವರ್ಕೌಟ್​ ವಿಡಿಯೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ‘ಕೊರೋನಾ ಭೀತಿಯಿಂದ ಜಿಮ್​ಗೆ ಹೋಗಲು ಆಗಿಲ್ಲ. ಹೀಗಾಗಿ ಯಾಸ್ಮಿನ್ ಹಾಗೂ ನಾನು ಮನೆಯಲ್ಲೇ ವರ್ಕೌಟ್ ಮಾಡಿದ ವಿಡಿಯೋಗಳನ್ನ ಹಂಚಿಕೊಂಡಿದ್ದೇನೆ. ಸುರಕ್ಷಿತವಾಗಿರಿ ಮತ್ತು ಸಾಧ್ಯವಾದ್ರೆ ಆಕ್ಟಿವ್ ಆಗಿರಿ’ ಅಂತ 36 ವರ್ಷದ ನಟಿ ಬರೆದುಕೊಂಡಿದ್ದಾರೆ.

ದೇಶದಲ್ಲಿ ಇದುವರೆಗೆ 125 ಜನರಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಮಹಾರಾಷ್ಟ್ರದಲ್ಲಿ 64 ವರ್ಷದ  ವೃದ್ಧರೊಬ್ಬರು ಮೃತಪಟ್ಟಿದ್ದರು. ಕೊರೋನಾ ವೈರಸ್ ಹರಡುವ ಭೀತಿಯಿಂದ ಶಾಲಾ-ಕಾಲೇಜು, ಸ್ವಿಮ್ಮಿಂಗ್ ಪೂಲ್, ಜಿಮ್​ಗಳನ್ನ ಬಂದ್ ಮಾಡಲಾಗಿದೆ.

-masthmagaa.com

https://www.instagram.com/p/B9zMwQJBoz_/?utm_source=ig_embed

Contact Us for Advertisement

Leave a Reply