ಎಲೆಕ್ಟ್ರಿಕ್​ ಜ್ಯೂಸರ್​ನಲ್ಲಿ ಅರ್ಧ ಕೆಜಿ ಚಿನ್ನದ ಗಟ್ಟಿ ತಂದು ಸಿಕ್ಕಿಬಿದ್ದ..!

masthmagaa.com:

ವಿದೇಶದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲು ಕಿರಾತಕರು ಚಿತ್ರವಿಚಿತ್ರ ಪ್ಲಾನ್​ ಮಾಡ್ತಾರೆ. ಒಳ ಉಡುಪು, ಚಪ್ಪಲಿ, ಹೊಟ್ಟೆ.. ಹೀಗೆ ಎಲ್ಲೆಲ್ಲೋ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳಸಾಗಣೆ ಮಾಡ್ತಾರೆ. ಇದೀಗ ಪ್ರಯಾಣಿಕನೊಬ್ಬ ಎಲೆಕ್ಟ್ರಿಕ್ ಜ್ಯೂಸರ್​ ಒಳಗೆ ಅರ್ಧ ಕೆಜಿಯಷ್ಟು ಚಿನ್ನದ ಗಟ್ಟಿಯನ್ನ ತಂದು ಕೇರಳದ ತಿರುವನಂತಪುರಂ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದಿದ್ದಾನೆ.

ಈ ಸಂಬಂಧ ಓರ್ವ ಪ್ರಯಾಣಿಕನನ್ನು ತಿರುವನಂತಪುರಂನ ಏರ್ ಇಂಟೆಲಿಜೆನ್ಸ್​ ಯುನಿಟ್ ಅರೆಸ್ಟ್ ಮಾಡಿದೆ. ಬಂಧಿತನಿಂದ ಎಲೆಕ್ಟ್ರಿಕ್​ ಜ್ಯೂಸರ್​ ಪಡೆದು ಓಪನ್ ಮಾಡಿ ನೋಡಿದಾಗ ಚಿನ್ನದ ಗಟ್ಟಿ ಪತ್ತೆಯಾಗಿದೆ. 524 ಗ್ರಾಂ ಇರುವ ಈ ಚಿನ್ನದ ಮೌಲ್ಯ 25 ಲಕ್ಷ ರೂಪಾಯಿ ಅಂತ ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ಮತ್ತಷ್ಟು ತನಿಖೆ ನಡೆಯುತ್ತಿದೆ ಅಂತ ಕೇರಳದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆಯಷ್ಟೇ ಕೇರಳದ ಪಲಕ್ಕಾಡ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 3 ಕೆಜಿಯಷ್ಟು ಚಿನ್ನದ ಬಾರ್​ ಮತ್ತು ಆಭರಣಗಳನ್ನ ಸೀಜ್ ಮಾಡಿದ್ದರು. ಇದರ ಮೌಲ್ಯ ಬರೋಬ್ಬರಿ 1.70 ಕೋಟಿ ರೂಪಾಯಿ ಅಂತ ಅಂದಾಜು ಮಾಡಲಾಗಿತ್ತು. ಇದೀಗ ತಿರುವನಂತಪುರಂನಲ್ಲಿ ಅರ್ಧ ಕೆಜಿ ಬಂಗಾರವನ್ನ ವಶಪಡಿಸಿಕೊಳ್ಳಲಾಗಿದೆ. ಕೇರಳದಲ್ಲಿ ಚಿನ್ನ ಕಳ್ಳಸಾಗಣೆ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದ್ದರೂ ಇಂತಹ ಪ್ರಕರಣಗಳು ಪ್ರತಿನಿತ್ಯ ಬೆಳಕಿಗೆ ಬರುತ್ತಿವೆ.

-masthmagaa.com

Contact Us for Advertisement

Leave a Reply