ಆಸಿಡ್‌ ದಾಳಿಗೊಳಗಾದವರ ಜೊತೆ ಕಿಂಗ್‌ ಖಾನ್‌

masthmagaa.com:

ಶಾರುಖ್ ಖಾನ್ ಕೋಲ್ಕತ್ತಾದಲ್ಲಿ ಆಸಿಡ್ ದಾಳಿಯಿಂದ ಬದುಕುಳಿದವರನ್ನು ಮೀಟ್‌ ಮಾಡಿದ್ದಾರೆ. ಇದೇ ಕಾರಣಕ್ಕೆ ಅನ್ಸತ್ತೆ ಅಭಿಮಾನಿಗಳು ಅವರನ್ನ ಕಿಂಗ್‌ ಅಂತ ಕರಿಯೋದು.

ಇತ್ತೀಚೆಗೆ ತಮ್ಮ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್‌ನ್ನ ಹುರಿದುಂಬಿಸೋದಕ್ಕೆ ಕೋಲ್ಕತ್ತಾಗೆ ಶಾರುಖ್ ಖಾನ್ ಬಂದಿದ್ದರು. ತಮ್ಮ ವಿಶೇಷ ಅಭಿಮಾನಿಗಳನ್ನು ಭೇಟಿ ಮಾಡಿ ಸ್ವಲ್ಪ ಹೊತ್ತು ಅವರೊಟ್ಟಿಗೆ ಟೈಮ್‌ ಸ್ಪೆಂಡ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿನ ಅಭಿಮಾನಿಗಳು ಶಾರುಖ್ ಆಸಿಡ್ ದಾಳಿಯಿಂದ ಬದುಕುಳಿದವರೊಂದಿಗಿನ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಕಪ್ಪು ಶರ್ಟ್ ಮತ್ತು ಜೀನ್ಸ್ ಧರಿಸಿ ಅಭಿಮಾನಿಗಳೊಂದಿಗೆ ಪೋಸ್ ನೀಡುವುದನ್ನು ಈ ಫೋಟೊದಲ್ಲಿ ನಾವು ನೋಡಬಹುದು. ಫೋಟೊಗಳನ್ನ ಪೋಸ್ಟ್ ಮಾಡಿದ ತಕ್ಷಣ, ಶಾರುಖ್‌ ಅಭಿಮಾನಿಗಳು ಕಾಮೆಂಟ್‌ಗಳ ಮೇಲೆ ಕಾಮೆಂಟ್‌ ಮಾಡೋಕೆ ಶುರು ಮಾಡಿದ್ದರು. ಒಬ್ಬರು “ಮಿಸ್ಟರ್‌ ಖಾನ್‌ ನಿಜವಾಗಿಯೂ ಹೃದಯ ಶ್ರೀಮಂತ ಅಂತ ಬರೆದುಕೊಂಡಿದ್ದಾರೆ. ಇನ್ನೊಬ್ಬರು “ಮತ್ತೊಮ್ಮೆ ನಮ್ಮ ಹೃದಯವನ್ನ ಗೆದ್ದು ಬಿಟ್ಟಿರಿ” ಅಂತ ಬರೆದಿದ್ದಾರೆ. ಹೀಗೆ ಹಲವಾರು ಸಾವಿರಾರು ಕಾಮೆಂಟ್‌ಗಳು ಶಾರುಖ್‌ ಅವರ ಪೋಸ್‌ಗೆ ಬಂದಿದೆ.

ಶಾರುಖ್ ಖಾನ್ ತಮ್ಮ ಮಗಳು ಸುಹಾನಾ ಖಾನ್ ಮತ್ತು ಆಕೆಯ ಆತ್ಮೀಯ ಸ್ನೇಹಿತೆ ಶನಯಾ ಕಪೂರ್ ಅವರೊಂದಿಗೆ ಕೆಲವು ದಿನಗಳ ಹಿಂದೆ ಕೋಲ್ಕತ್ತಾದಲ್ಲಿದ್ದರು. ಪಂದ್ಯದ ಹಲವಾರು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

-masthmagaa.com

Contact Us for Advertisement

Leave a Reply