ದೆಹಲಿ ಬ್ಲಾಸ್ಟ್​​ ಬೆನ್ನಲ್ಲೇ ಪೊಲೀಸರಿಗೆ ಶರಣಾದ ಇಬ್ಬರು ಉಗ್ರರು!

masthmagaa.com:

ದೆಹಲಿ: ನಿನ್ನೆಯಷ್ಟೇ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಲಘುಸ್ಫೋಟ ನಡೆದಿತ್ತು. ಇದ್ರ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಶರಣಾಗಿದ್ದಾರೆ. ಪುಲ್ವಾಮಾದ ಲೆಲ್ಹಾರ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು , ಗಾಯಗೊಂಡ ಉಗ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತರಿಂದ ಎಕೆ-47  ರೈಫಲ್​​ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಅಂತ ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೆ ನಿನ್ನೆ ಸಂಜೆ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಸಂಭವಿಸಿತ್ತು. ಇದ್ರ ಬೆನ್ನಲ್ಲೇ ರಾತ್ರಿ 8 ಗಂಟೆ ವೇಳೆಗೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಶುರುವಾಗಿತ್ತು.

-masthmagaa.com

Contact Us for Advertisement

Leave a Reply