ಅಮೆರಿಕದಲ್ಲಿ 33,000 ಜನರಿಗೆ ಕೊರೋನಾ.. ಚೀನಾ ವಿರುದ್ಧ ಟ್ರಂಪ್ ಬೇಸರ..!

masthmagaa.com:

ಇಡೀ ವಿಶ್ವದಲ್ಲಿ 14 ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿರೋ ಕೊರೋನಾ ಆರ್ಭಟಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ನಲುಗಿ ಹೋಗಿದೆ. ಕೊರೋನಾ ಸೋಂಕಿಗೆ ಅಮೆರಿಕದಲ್ಲಿ 400ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, 33,000ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ನ್ಯೂಯಾರ್ಕ್​ವೊಂದರಲ್ಲೇ ದೃಢಪಟ್ಟಿರೋದು ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ವಾಷಿಂಗ್ಟನ್​, ನ್ಯೂಜೆರ್ಸಿ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ.

ಇನ್ನು ಈ ಬಗ್ಗೆ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಈ ಕಾಯಿಲೆ ಬಗ್ಗೆ ಚೀನಾದವರು ನಮಗೆ ಮೊದಲೇ ಹೇಳಬೇಕಿತ್ತು ಎಂದಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ನಾನು ಚೀನಾ ವಿರುದ್ಧ ಸ್ವಲ್ಪ ಅಸಮಾಧಾನಗೊಂಡಿದ್ದೇನೆ ಅಂತಾನೂ ಹೇಳಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್​ ಬಗ್ಗೆ ಆರಂಭದಲ್ಲಿ ಚೀನಾ ಮುಚ್ಚುಮರೆ ಮಾಡಿತ್ತು ಅನ್ನೋ ಮಾತುಗಳು ಕೇಳಿಬಂದಿತ್ತು.

-masthmagaa.com

Contact Us for Advertisement

Leave a Reply