ಬೆಂಗಳೂರಲ್ಲಿ ಒಂದು ವಾರ ಮಾತ್ರ ಲಾಕ್​ಡೌನ್.. ವದಂತಿಗೆ ತೆರೆ ಎಳೆದ ಸರ್ಕಾರ

masthmagaa.com:

ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಒಂದು ವಾರದ ಲಾಕ್​ಡೌನ್ ಅನ್ನು ಮುಂದುವರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಅಂತ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ 8 ವಲಯಗಳ ಉಸ್ತುವಾರಿ ಸಚಿವರ ಜೊತೆ ಇವತ್ತು ಸಭೆ ನಡೆಸಿದ ಬಿಎಸ್​ವೈ, ಕೊರೋನಾ‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ ಅಂತ ಹೇಳಿದ್ದಾರೆ.

ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್​. ಅಶೋಕ್ ಕೂಡ ಇದೇ ಮಾತನ್ನು ಹೇಳಿದ್ರು. ಬೆಂಗಳೂರಿನಲ್ಲಿ ಲಾಕ್​ಡೌನ್ ಅನ್ನು ಯಾವುದೇ ಕಾರಣಕ್ಕೂ ಮುಂದುವರಿಸೋದಿಲ್ಲ ಅಂದ್ರು. ಇದರೊಂದಿಗೆ ಬೆಂಗಳೂರಿನಲ್ಲಿ ಎರಡು ವಾರ ಲಾಕ್​ಡೌನ್ ಮುಂದುವರಿಯುತ್ತೆ, ಮೂರು ವಾರ ಲಾಕ್​ಡೌನ್ ಮುಂದುವರಿಯುತ್ತೆ ಅನ್ನೋ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲಾಗುವುದಿಲ್ಲ: ಚೀನಾಗೆ ಸಿಂಗ್ ವಾರ್ನಿಂಗ್

ಬೆಂಗಳೂರಿನಲ್ಲಿ ಕೊರೋನಾ ಹಾವಳಿಯನ್ನ ನಿಯಂತ್ರಿಸಲು ಮತ್ತಷ್ಟು ವಾರಗಳ ಕಾಲ ಲಾಕ್​ಡೌನ್ ವಿಸ್ತರಿಸಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಸ್ವತಃ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಕೂಡ ಲಾಕ್​ಡೌನ್ ವಿಸ್ತರಿಸಬೇಕು ಅಂತ ಮನವಿ ಮಾಡಿದ್ದರು. ಆದ್ರೀಗ ಬೆಂಗಳೂರಿನ ಲಾಕ್​ಡೌನ್ ಕೇವಲ ಒಂದು ವಾರಕ್ಕೆ ಸೀಮಿತ ಅಂತ ಸರ್ಕಾರ ಸ್ಪಷ್ಟಪಡಿಸಿದೆ.

ಬೆಂಗಳೂರಿಲ್ಲಿ ಕೊರೋನಾ ವೈರಸ್​ ವೇಗವಾಗಿ ಹರಡುತ್ತಿದೆ. ಪ್ರತಿದಿನವೂ ಹೊಸ ಹೊಸ ದಾಖಲೆ ಬರೀತಿದೆ. ಕಳೆದ ಎರಡ್ಮೂರು ದಿನಗಳಿಂದ ಪ್ರತಿದಿನ 50ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರು ಕೊರೋನಾ ಚಿತ್ರಣ:

ಒಟ್ಟು ಪ್ರಕರಣ: 25,288

ಮೃತಪಟ್ಟವರು: 507

ಗುಣಮುಖ: 5,952

ಸಕ್ರಿಯ ಪ್ರಕರಣ: 18,828

-masthmagaa.com

Contact Us for Advertisement

Leave a Reply