masthmagaa.com:

‘ಲವ್​ ಜಿಹಾದ್’ ವಿರುದ್ಧ ಕಠಿಣ ಕಾನೂನುಗಳನ್ನ ತರಲು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಚಿಂತನೆ ನಡೆಸುತ್ತಿವೆ. ಇದರ ನಡುವೆಯೇ ಮಧ್ಯಪ್ರದೇಶ ಸರ್ಕಾರವು, ‘ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಮಸೂದೆ-2020’ ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಅಂತಿಮ ತಯಾರಿ ನಡೆಸಿದೆ. ಇದರ ಅಡಿಯಲ್ಲಿ ಕಾನೂನು ಉಲ್ಲಂಘಿಸುವವರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಜೊತೆಗೆ ಇಂತಹ ಅಪರಾಧಗಳನ್ನ ಜಾಮೀನು ರಹಿತ ಅಪರಾಧವೆಂದು ಘೋಷಿಸಲು ನಿರ್ಧರಿಸಿದ್ದೇವೆ ಅಂತ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಅಲ್ಲದೆ ಧಾರ್ಮಿಕ ಮತಾಂತರಕ್ಕಾಗಿ ಬಲವಂತದಿಂದ ಮಾಡುವ ಮದುವೆಗಳನ್ನ ಅನೂರ್ಜಿತಗೊಳಿಸಲು ಹೊಸ ಕಾನೂನಿನಲ್ಲಿ ಅವಕಾಶವಿರುತ್ತದೆ. ಲವ್ ಜಿಹಾದ್​ಗೆ ಸಹಾಯ ಮಾಡುವವರನ್ನ ಕೂಡ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಇನ್ನು ಮತಾಂತರಕ್ಕೊಳಗಾದ ವ್ಯಕ್ತಿ ಅಥವಾ ಅವರ ಪೋಷಕರು ಅಥವಾ ಸಹೋದರ, ಸಹೋದರಿಯರು ದೂರು ದಾಖಲಿಸಬೇಕು. ಮತ್ತೊಂದುಕಡೆ ಮದುವೆಗಾಗಿ ಮತಾಂತರ ಮಾಡಿಸುವ ವ್ಯಕ್ತಿ ಅಥವಾ ಮತಾಂತರ ಮಾಡುವ ಧಾರ್ಮಿಕ ವ್ಯಕ್ತಿಯು ಒಂದು ತಿಂಗಳು ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಅಂತ ಮಸೂದೆಯಲ್ಲಿರುವ ಕೆಲವೊಂದು ವಿಚಾರಗಳನ್ನ ನರೋತ್ತಮ್ ಮಿಶ್ರಾ ಬಹಿರಂಗಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply