ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಣೆ..!

masthmagaa.com:

ಕೊರೋನಾ ವೈರಸ್​ ಹಾವಳಿಗೆ ತತ್ತರಿಸಿರೋ ಮಹಾರಾಷ್ಟ್ರದಲ್ಲಿ ಮೇ 31ರವರೆಗೆ ಲಾಕ್​​ಡೌನ್ ವಿಸ್ತರಿಸಲಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದ್ದು ಕೊರೋನಾವನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಲಾಕ್​ಡೌನ್​ ಮುಂದುವರಿಸಲು ನಿರ್ಧರಿಸಲಾಗಿದೆ. ಎಲ್ಲಾ ಇಲಾಖೆಗಳು ಲಾಕ್​ಡೌನ್​ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಅಂತ ಸೂಚಿಸಲಾಗಿದೆ.

ಜೊತೆಗೆ ಹಂತ ಹಂತವಾಗಿ ಲಾಕ್​ಡೌನ್ ನಿರ್ಬಂಧಗಳನ್ನ ತೆಗೆಯುವ ಬಗ್ಗೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಲಾಗುವುದು ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಹೇರಿರುವ 3ನೇ ಹಂತದ ಲಾಕ್​ಡೌನ್ ಇಂದು ಅಂತ್ಯವಾಗಲಿದೆ. ನಾಳೆಯಿಂದ 4ನೇ ಹಂತದ ಲಾಕ್​ಡೌನ್​ ಜಾರಿಯಾಗಲಿದ್ದು, ಸಂಪೂರ್ಣವಾಗಿ ಭಿನ್ನವಾಗಿರಲಿದೆ.

ಮಹಾರಾಷ್ಟ್ರದಲ್ಲಿ ಇದುವರೆಗೆ 30 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಮುಂಬೈ, ಪುಣೆ ಮುಂತಾದ ಕಡೆಗಳಲ್ಲಿ ಕಾಯಿಲೆಯ ಹಾವಳಿ ತುಂಬಾ ಜಾಸ್ತಿಯಾಗಿದೆ. ಹೀಗಾಗಿ ಮೇ 31ರವರೆಗೆ ಲಾಕ್​ಡೌನ್ ವಿಸ್ತರಿಸುವ ನಿರ್ಧಾರವನ್ನ ಉದ್ಧವ್ ಠಾಕ್ರೆ ಸರ್ಕಾರ ಕೈಗೊಂಡಿದೆ.

ಅತ್ತ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲೂ ಮೇ 31ರವರೆಗೆ ಲಾಕ್​ಡೌನ್ ವಿಸ್ತರಿಸಿ ಸಿಎಂ ಕೆ.  ಪಳನಿಸ್ವಾಮಿ ಆದೇಶ ಹೊರಡಿಸಿದ್ದಾರೆ.

-masthmagaa.com

Contact Us for Advertisement

Leave a Reply