ಮಹಾರಾಷ್ಟ್ರದಲ್ಲಿ ಸಿಎಂ v/s ರಾಜ್ಯಪಾಲರ ‘ಟೆಂಪಲ್​’ ಫೈಟ್​..!

masthmagaa.com:

ಕೊರೋನಾ ಹಾವಳಿ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳ ಬಾಗಿಲು ಇನ್ನೂ ತೆರೆದಿಲ್ಲ. ದೇವಸ್ಥಾನಗಳನ್ನು ತೆರೆಯುವುದರ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಧ್ಯೆ ಪತ್ರಸಮರ ನಡೆದಿದೆ. ಕೆಲ ತಿಂಗಳಿಂದ ದೇವಸ್ಥಾನ ತೆರೆಯಲು ಅನುಮತಿ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಧಾರ್ಮಿಕ ಸಂಘಟನೆಗಳು ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಿಎಂ ಉದ್ಧವ್​​ಗೆ ಪತ್ರ ಬರೆದಿರುವ ರಾಜ್ಯಪಾಲರು, ದೇವಸ್ಥಾನ ಪುನಾರಂಭ ಮುಂದೂಡಲು ನಿಮಗೆ ಯಾವುದಾದ್ರೂ ದೈವಿಕ ಮುನ್ಸೂಚನೆ ಸಿಕ್ಕಿದೆಯಾ..? ಅಥವಾ ನೀವು ಈ ಹಿಂದೆ ದ್ವೇಷಿಸುತ್ತಿದ್ದ ಜಾತ್ಯಾತೀತರಾಗಿಬಿಟ್ರಾ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿಎಂ ಉದ್ಧವ್ ಠಾಕ್ರೆ, ಜಾತ್ಯಾತೀತತೆ ಸಂವಿಧಾನದ ಅವಿಭಾಜ್ಯ ಅಂಗ. ನನಗೆ ಯಾರಿಂದಲೂ ಹಿಂದುತ್ವದ ಸೆರ್ಟಿಫಿಕೇಟ್ ಬೇಕಾಗಿಲ್ಲ ಅಂತ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ದೇವಸ್ಥಾನಗಳನ್ನು ತೆರೆಯಬೇಕು ಅಂತ ಇವತ್ತು ಬಿಜೆಪಿ ಕಾರ್ಯಕರ್ತರು ಮುಂಬೈ ಪ್ರಸಿದ್ಧ ಸಿದ್ಧಿ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply