ಫ್ರೆಂಡ್​ ಮನೆಗೆ ಹೋಗಬಹುದಾ ಕೇಳಿದ್ದಕ್ಕೆ ಪೊಲೀಸರು ಹೇಳಿದ್ದೇನು ಗೊತ್ತಾ..?

-masthmagaa.com:

ಇಡೀ ದೇಶದಾದ್ಯಂತ ಲಾಕ್​​ಡೌನ್ ಹೇರಿದ್ದರೂ ಜನ ಮಾತ್ರ ತಮ್ಮ ತಮ್ಮ ಊರುಗಳಿಗೆ ಹೋಗೋದ್ರಲ್ಲೇ ಬ್ಯುಸಿಯಾಗಿದ್ದಾರೆ. ರಾಜ್ಯ ರಾಜಧಾನಿ ಮಾತ್ರವಲ್ಲ ರಾಷ್ಟ್ರ ರಾಜಧಾನಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇದರ ನಡುವೆ ತಾನು ಫ್ರೆಂಡ್​ ಮನೆಗೆ ಹೋಗಬಹುದಾ ಅಂತ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ದೆಹಲಿ ಪೊಲೀಸರು ಕೊಟ್ಟ ಉತ್ತರ ನೆಟ್ಟಿಗರ ಹೃದಯ ಗೆದ್ದಿದೆ.

ಅಂದ್ಹಾಗೆ ದೀಪಕ್ ಎಂಬ ವ್ಯಕ್ತಿ ಟ್ವಿಟ್ಟರ್​ನಲ್ಲಿ, ‘ಸರ್, ನಾನು 2 ಕಿಲೋ ಮೀಟರ್​ ದೂರದಲ್ಲಿರೋ ಸ್ನೇಹಿತರ ಮನೆಗೆ ಹೋಗಬಹುದಾ..?’ ಅಂತ ದೆಹಲಿ ಪೊಲೀಸರಿಗೆ ಕೇಳಿದ್ದಾನೆ. ಇದಕ್ಕೆ ಟ್ವಿಟ್ಟರ್​ನಲ್ಲೇ ಉತ್ತರ ನೀಡಿದ ಪೊಲೀಸರು, ‘ನೀವು ನಿಜವಾದ ಸ್ನೇಹಿತರೇ ಆಗಿದ್ದರೆ ಮನೆಯಲ್ಲೇ ಇರಿ. ಅವರ ಮನೆಗೆ ಹೋಗೋ ಬದಲು ವಿಡಿಯೋ ಕಾಲ್ ಮಾಡಿ’ ಎಂದಿದ್ದಾರೆ.

ದೆಹಲಿ ಪೊಲೀಸರ ಉತ್ತರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅದ್ಭುತ ಪ್ರತಿಕ್ರಿಯೆ ಅಂತ ಕಾಮೆಂಟ್ ಮಾಡಿದ್ದಾರೆ.

-masthmagaa.com

 

Contact Us for Advertisement

Leave a Reply