ಹೋಂ ಐಸೋಲೇಷನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ..!

masthmagaa.com:

ಹೋಂ ಐಸೋಲೇಷನ್​ನಲ್ಲಿದ್ದ 35 ವರ್ಷದ ವಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ತಮಿಳುನಾಡಿನಿಂದ ಇತ್ತೀಚೆಗಷ್ಟೇ ಹುಟ್ಟೂರಿಗೆ ಮರಳಿದ್ದ ಈತನನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಹೋಂ ಐಸೋಲೇಷನ್​ಗೆ ಒಳಪಡಿಸಿದ್ದರು.

ಆದ್ರೆ ಈತನಿಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇರಲಿಲ್ಲ ಅಂತ ಸ್ಥಳೀಯ ಪೊಲೀಸರು ಹೇಳಿದ್ದಾರೆ. ಅಲ್ಲದೆ ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅನ್ನೋದು ಗೊತ್ತಾಗಿದೆ. ಆತ್ಮಹತ್ಯೆಗೆ ಕಾರಣವೇನು ಅನ್ನೋದು ತಿಳಿದಿಲ್ಲ. ಆದ್ರೆ ವರ್ಷದ ಹಿಂದೆಯಷ್ಟೇ ಈತನ ಪತ್ನಿ ಹಾಗೂ ಮಗನನ್ನು ಕಳೆದುಕೊಂಡಿದ್ದ ಈತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply