masthmagaa.com:

ಲವ್ ಜಿಹಾದ್ ಕಾನೂನು ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗಲೇ ಕರ್ನಾಟಕ ಹೈಕೋರ್ಟ್​ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ‘ಯಾವುದೇ ಗಂಡು ಅಥವಾ ಹೆಣ್ಣು ತಮಗಿಷ್ಟ ಬಂದವರನ್ನ ಮದುವೆಯಾಗಲು ಸಂವಿಧಾನವೇ ಮೂಲಭೂತ ಹಕ್ಕು ನೀಡಿದೆ. ಅದನ್ನ ಜಾತಿ ಅಥವಾ ಧರ್ಮದ ಆಧಾರದಲ್ಲಿ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ಅಂತ ಹೈಕೋರ್ಟ್ ಹೇಳಿದೆ. ಈ ಹಿಂದೆ ಅಲಹಾಬಾದ್ ಮತ್ತು ದೆಹಲಿ ಹೈಕೋರ್ಟ್​ಗಳು ಕೂಡ ಇಂತಹದ್ದೇ ತೀರ್ಪು ನೀಡಿದ್ದವು.

ಅಂದ್ಹಾಗೆ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ವಜೀದ್ ಖಾನ್ ಮತ್ತು ಆತನ ಸಹೋದ್ಯೋಗಿ ರಮ್ಯಾ ಎಂಬುವವರು ಮದುವೆಯಾಗಲು ಮುಂದಾಗಿದ್ದಾರೆ. ಇದಕ್ಕೆ ವಜೀದ್​ರ ತಾಯಿ ಶ್ರೀಲಕ್ಷ್ಮೀ ನಮಗೇನು ಅಭ್ಯಂತರವಿಲ್ಲ ಅಂತ ಹೇಳಿದ್ದಾರೆ. ಆದ್ರೆ ರಮ್ಯಾ ಪೋಷಕರಾದ ಗಂಗಾಧರ್ ಮತ್ತು ಗಿರಿಜಾ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೋರ್ಟ್​ ಮೆಟ್ಟಿಲೇರಿದ್ದ ವಜೀದ್ ಖಾನ್, ರಮ್ಯಾಗೆ ತನಗಿಷ್ಟ ಬಂದವರನ್ನ ಮದುವೆಯಾಗುವ ಸ್ವಾತಂತ್ರ್ಯವನ್ನ ನೀಡಬೇಕು ಅಂತ ಮನವಿ ಮಾಡಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಜೊತೆಗೆ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ರಮ್ಯಾಗೆ ತನ್ನ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ ಹೇಳಿದೆ. ಈ ಪ್ರಕರಣದಲ್ಲಿ ಯಾರು ಯಾರನ್ನೂ ಮತಾಂತರ ಮಾಡಿಲ್ಲ. ಜೊತೆಗೆ ಅಂತರ್​ ಜಾತಿ ಮತ್ತು ಅಂತರ್​ ಧರ್ಮೀಯ ಮದುವೆಗೆ ಸಂಬಂಧಿಸಿದಂತೆ ಜನರಲ್ಲಿರುವ ಗೊಂದಲವನ್ನ ಈ ತೀರ್ಪು ಬಗೆಹರಿಸಿದಂತಿದೆ.

-masthmagaa.com

Contact Us for Advertisement

Leave a Reply