ಪಂಡೋರಾ ಪೇಪರ್​ನಲ್ಲಿ ಭಾರತೀಯರ ಹೆಸರು! ತನಿಖೆ ಶುರು

masthmaga.com:

ಪೆಂಡೋರಾ ಪೇಪರ್ಸ್​ನಲ್ಲಿ ಉಲ್ಲೇಖಿಸಿರೋ ಭಾರತೀಯರು ಮತ್ತು ಭಾರತದ ಎಂಟಿಟಿಗಳ ಬಗ್ಗೆ ಮಲ್ಟಿ ಏಜೆನ್ಸಿ ಗ್ರೂಪ್​ – MAG ಪ್ರಾಥಮಿಕ ತನಿಖೆ ಶುರು ಮಾಡಿದೆ. ಈ ಮಲ್ಟಿ ಏಜೆನ್ಸಿ ಗ್ರೂಪ್​​ನ ಮೊದಲ ಸಭೆ ಕಳೆದ ವಾರ ನಡೆದಿದೆ. ಇದರ ಅಧ್ಯಕ್ಷತೆಯನ್ನ ಸೆಂಟ್ರಲ್​ ಬೋರ್ಡ್​ ಆಫ್​ ಡೈರೆಕ್ಟ್ ಟ್ಯಾಕ್ಸಸ್​ ಅಧ್ಯಕ್ಷ ಜೆಬಿ ಮೊಹಾಪತ್ರ ವಹಿಸಿದ್ರು. ಇವರ ಜೊತೆಗೆ ಇಡಿ, ಆರ್​ಬಿಐ, ಫೈನಾನ್ಷಿಯಲ್ ಇಂಟಲಿಜೆನ್ಸ್​ ಯೂನಿಟ್​ನ ಅಧಿಕಾರಿಗಳು ಭಾಗವಹಿಸಿದ್ರು. ಭಾರತದ ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್​, ಕಿರಣ್​ ಮಜುಮ್ದಾರ್ ಶಾ, ನೀರವ್​ ಮೋದಿ, ಜಾಕಿ ಶ್ರಾಫ್​​ ಸೇರಿದಂತೆ ವಿವಿಧ ದೇಶಗಳ ಕುಬೇರರು ಬೇರೆ ಬೇರೆ ದೇಶದಲ್ಲಿ ಸೀಕ್ರೆಟ್ ಆಗಿ ಆಸ್ತಿ ಮಾಡಿಟ್ಟಿದ್ದಾರೆ ಅಂತ ಪೆಂಡೋರಾ ಪೇಪರ್ಸ್​ನಲ್ಲಿ ಹೇಳಲಾಗಿತ್ತು. ಮೂಲಗಳ ಪ್ರಕಾರ, ‘380 ಭಾರತೀಯರ ಪೈಕಿ ಕೆಲವೇ ಕೆಲವು ಭಾರತೀಯರ ಮತ್ತು ಭಾರತೀಯ ಎಂಟಿಟಿಗಳ ಹೆಸರು ಮಾಧ್ಯಮಗಳ ಮುಂದೆ ಬಂದಿದೆ. ಉಳಿದ ಹೆಸರು ಬೆಳಕಿಗೆ ಬಂದ ತಕ್ಷಣ ತನಿಖೆಗೆ ಮತ್ತಷ್ಟು ವೇಗ ಕೊಡಲಾಗುತ್ತೆ ಅಂತ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೊತೆಗೆ, ಪೆಂಡೋರಾ ಪೇಪರ್ಸ್​ನಲ್ಲಿರುವ ಭಾರತೀಯರು ಸೀಕ್ರೆಟ್ ಆಗಿ ಆಸ್ತಿ ಮಾಡಿರೋ ದೇಶಗಳ ಬಳಿ ಆಟೋಮ್ಯಾಟಿಕ್​ ಎಕ್ಸ್​ಚೇಂಜ್ ಆಫ್​ ಇನ್ಪಾರ್ಮೇಷನ್ ಮೂಲಕ ಮಾಹಿತಿ ಪಡೆಯಲಾಗುತ್ತೆ. ಆ ಮಾಹಿತಿಯನ್ನ ಆಧರಿಸಿ, ಸೀಕ್ರೆಟ್​ ಆಗಿ ಮಾಡಿರೋ ಆಸ್ತಿ ಪಾಸ್ತಿಗೆ ಆ ವ್ಯಕ್ತಿಗಳು ​ಟ್ಯಾಕ್ಸ್ ಕಟ್ಟಿದ್ದಾರಾ ಅಥವಾ ತೆರಿಗೆ ವಂಚಿಸಿದ್ದಾರಾ ಅನ್ನೋದನ್ನ ಚೆಕ್​​ ಮಾಡಲಾಗುತ್ತೆ ಅಂತಾನೂ ಮಲ್ಟಿ ಏಜೆನ್ಸಿ ಗ್ರೂಪ್ ಸಭೆಯಲ್ಲಿ ನಿರ್ಧರಿಸಲಾಗಿದೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply