ಭೀಕರ ಸ್ಫೋಟ ಮಾಸುವ ಮುನ್ನವೇ ಬೀರುಟ್​ನಲ್ಲಿ ಮತ್ತೊಂದು ಅವಘಡ

masthmagaa.com:

ಇತ್ತೀಚೆಗೆ ಲೆಬನಾನ್ ರಾಜಧಾನಿ ಬೀರುಟ್​​ನಲ್ಲಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್​ ಸ್ಫೋಟವಾಗಿ 190 ಜನ ಮೃತಪಟ್ಟಿದ್ದರು. ಸುತ್ತಮುತ್ತಲ ಕಟ್ಟಡ, ವಾಹನಗಳಿಗೆ ಸಾಕಷ್ಟು ಹಾನಿಯಾಗಿತ್ತು. ಅದಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಅದೇ ಬೀರುಟ್​ನ, ಅಂದು ಸ್ಫೋಟ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಆಗಸ್ಟ್ 4ರಂದು ಇದೇ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿತ್ತು. ಪರಮಾಣು ಬಾಂಬ್​ನಂತಹ ಸ್ಫೋಟದ ತೀವ್ರತೆ ಇಡೀ ಬೀರುಟ್ ನಗರ ನಲುಗಿತ್ತು. ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯಾಗಿತ್ತುಮ, ಸಾವಿರಾರು ವಾಹನಗಳು ಜಖಂ ಆಗಿದ್ದವು. ಸುಮಾರು 3 ಲಕ್ಷ ಮನೆಗಳನ್ನ ಕಳೆದುಕೊಂಡಿದ್ದರು.

-masthmagaa.com

Contact Us for Advertisement

Leave a Reply