masthmagaa.com:

ಅದು ನವೆಂಬರ್ 15, 1989.. ಸಚಿನ್ ರಮೇಶ್ ತೆಂಡೂಲ್ಕರ್ ಎಂಬ​ 16 ವರ್ಷ ವಯಸ್ಸಿನ ಪುಟ್ಟ ಬಾಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಐತಿಹಾಸಿಕ ದಿನ. ಅಂದು ಪಾಕಿಸ್ತಾನದ ಕರಾಚಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಸ್ಥಾನ ಪಡೆದಿದ್ರು. ಇದೇ ಪಂದ್ಯದಲ್ಲಿ ಪಾಕ್​ ವೇಗಿ ವಾಕರ್ ಯೂನಿಸ್​ ಕೂಡ ಪದಾರ್ಪಣೆ ಮಾಡಿದ್ರು. ವಿಶೇಷ ಅಂದ್ರೆ ಈ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ವಾಕರ್ ಯೂನಿಸ್​ ಅವರೇ ಸಚಿನ್ ಅವರನ್ನ ಔಟ್ ಮಾಡಿದ್ರು. ಆಗ ಸಚಿನ್ 15 ರನ್​ ಗಳಿಸಿದ್ರು. ಈ ಪಂದ್ಯ ಡ್ರಾ ಆಯ್ತು. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಾಕರ್ ಯೂನಿಸ್ ಎಸೆದ ಬೌನ್ಸರ್ ಸಚಿನ್ ಅವರ ಮೂಗಿಗೆ ಬಂದು ಬಡಿದಿತ್ತು. ಆದರೂ ವೈದ್ಯಕೀಯ ನೆರವು ಪಡೆಯಲು ನಿರಾಕರಿಸಿದ ಸಚಿನ್, ಮೂಗಿನಿಂದ ರಕ್ತ ತೊಟ್ಟಿಕ್ಕುತ್ತಿದ್ದರೂ ಬ್ಯಾಟಿಂಗ್ ಮುಂದುವರಿಸಿದ್ರು.

ವರ್ಷಗಳು ಕಳೆದಂತೆ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಎಂಬ ನಿಕ್​ನೇಮ್ ಬಂತು. ಕ್ರಿಕೆಟ್ ಇತಿಹಾಸದಲ್ಲಿ ‘ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್’ ಅಂತ ಕರೆಯಲಾಯ್ತು. ಇಂತಹ ಸಚಿನ್ ತೆಂಡೂಲ್ಕರ್ 2013ರ ನವೆಂಬರ್ 16ರಂದು ಅಂದ್ರೆ ಬರೋಬ್ಬರಿ 24 ವರ್ಷ ಮತ್ತು 1 ದಿನದ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಂದು ನಡೆದ ತಮ್ಮ 200ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 74 ರನ್ ಸಿಡಿಸಿ ಸಚಿನ್ ಔಟಾಗುತ್ತಿದ್ದಂತೇ ಕ್ರೀಡಾಂಗಣದಲ್ಲಿ ನೀರವ ಮೌನ ಆವರಿಸಿತ್ತು.

ಸಚಿನ್ ತೆಂಡೂಲ್ಕರ್ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರೂ ಇದುವರೆಗೂ ಅವರ ಕೆಲವೊಂದು ದಾಖಲೆಗಳನ್ನ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಟೆಸ್ಟ್ ಮತ್ತು ಏಕಿದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಅವರ ಹೆಸರಲ್ಲೇ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಕೂಡ ಸಚಿನ್ ಹೆಸರಲ್ಲಿದೆ. 2019ರಲ್ಲಿ ಸಚಿನ್ ಅವರನ್ನ ಐಸಿಸಿ ಹಾಲ್ ಆಫ್ ಫೇಮ್​ಗೆ ಸೇರಿಸಲಾಯ್ತು. ಇದಕ್ಕೆ ಸೇರ್ಪಡೆಗೊಂಡ ಭಾರತದ 6ನೇ ಆಟಗಾರ ಇವರಾಗಿದ್ದಾರೆ. ಸಚಿನ್ ಒಟ್ಟು 34,357 ರನ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ್ ಸಂಗಕ್ಕರಗೂ ಸಚಿನ್​ಗೂ ಬರೋಬ್ಬರಿ 6,000 ರನ್​ಗಳ ಅಂತರವಿದೆ. 1996ರಲ್ಲಿ ಸಚಿನ್​ಗೆ ಟೀಂ ಇಡಿಯಾದ ನಾಯಕತ್ವ ಒಲಿದು ಬಂತು. ಆದ್ರೆ ಅವರ ನಾಯಕತ್ವದಲ್ಲಿ ಭಾರತ ಹಲವು ಸೋಲುಗಳನ್ನ ಕಾಣ್ತು, ಸ್ವತಃ ಸಚಿನ್​ ಅವರ ಫಾರ್ಮ್ ಬಗ್ಗೆಯೂ ಪ್ರಶ್ನೆ ಎದ್ದಿತು. ಇದನ್ನರಿತ ಸಚಿನ್ ಕ್ಯಾಪ್ಟನ್ಸಿಗೆ ಗುಡ್​ಬೈ ಹೇಳಿದ್ರು. ಸೌರವ್ ಗಂಗೂಲಿ ಟೀಂ ಇಂಡಿಯಾ ನಾಯಕರಾದ್ರು. ಅಂದ್ಹಾಗೆ ಸಚಿನ್ ತೆಂಡೂಲ್ಕರ್ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

-masthmagaa.com

Contact Us for Advertisement

Leave a Reply