masthmagaa.com:

ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತ ಸಂಘಟನೆಗಳು ಕೊಟ್ಟಿರುವ ಡಿಸೆಂಬರ್ 8ರ ‘ಭಾರತ್ ಬಂದ್​’ಗೆ ಬಿಜೆಪಿಯೇತರ ಪಕ್ಷಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಪ್ರಮುಖವಾಗಿ ಕಾಂಗ್ರೆಸ್, ಆಮ್​ ಆದ್ಮಿ ಪಾರ್ಟಿ (AAP), ನ್ಯಾಷನಲ್ ಕಾಂಗ್ರೆಸ್​ ಪಾರ್ಟಿ (NCP), ಶಿವಸೇನೆ, ತೆಲಂಗಾಣ ರಾಷ್ಟ್ರೀಯ ಸಮಿತಿ (TRS), ರಾಷ್ಟ್ರೀಯ ಜನತಾ ದಳ (RJD), ತೃಣಮೂಲ ಕಾಂಗ್ರೆಸ್ (TMC)​ ಸೇರಿದಂತೆ ಹಲವು ಪಕ್ಷಗಳು ಸಪೋರ್ಟ್​ ಕೊಡೋದಾಗಿ ಹೇಳಿವೆ. ಹಲವು ಕಾರ್ಮಿಕ ಸಂಘಟನೆಗಳು ಕೂಡ ಬಂದ್​ಗೆ ಬೆಂಬಲ ಸೂಚಿಸಿವೆ. ಹೀಗಾಗಿ ಡಿಸೆಂಬರ್ 8ರ ನಡೆಯುವ ‘ಭಾರತ್ ಬಂದ್’ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ​ ಬಹುತೇಕ ಯಶಸ್ವಿಯಾಗುವ ಲಕ್ಷಣ ಕಾಣ್ತಿದೆ.

-masthmagaa.com

Contact Us for Advertisement

Leave a Reply