ಭಾರತೀಯರ ಸಾಲದ ಕಥೆ ನೋಡಿದ್ರೆ ಶಾಕ್ ಆಗ್ತೀರಿ!

masthmagaa.com:

ಭಾರತದಲ್ಲಿ 50 ಪರ್ಸೆಂಟ್​​ಗೂ ಹೆಚ್ಚು ಕೃಷಿ ಕುಟುಂಬಗಳು ಸಾಲದಲ್ಲಿವೆ ಅಂತ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ ಮಾಹಿತಿ ನೀಡಿದೆ. ಈ ಕುಟುಂಬಗಳ ಮೇಲೆ ಸರಾಸರಿ 74,121 ರೂಪಾಯಿಯಷ್ಟು ಸಾಲ ಇದೆ. ಒಟ್ಟು ಸಾಲದ ಪೈಕಿ 69.6 ಪರ್ಸೆಂಟ್​ನಷ್ಟು ಸಾಲವನ್ನು ಸಾಂಸ್ಥಿಕ ಮೂಲಕ ಅಂದ್ರೆ ಬ್ಯಾಂಕ್​, ಕೋ ಆಪರೇಟಿವ್ ಸೊಸೈಟಿ ಮತ್ತು ಸರ್ಕಾರಿ ಸಂಸ್ಥೆಗಳಿಂದ ಪಡೆಯಲಾಗಿದೆ. ಉಳಿದಂತೆ 20.5 ಪರ್ಸೆಂಟ್​ನಷ್ಟು ಸಾಲವನ್ನು ಸ್ಥಳೀಯ ಮಟ್ಟದಲ್ಲಿ ಸಾಲ ನೀಡುವವರಿಂದ ಪಡೆಯಲಾಗಿದೆ ಅಂತ ಮಾಹಿತಿ ನೀಡಿದೆ. ಇನ್ನೊಂದು ವಿಚಾರ ಅಂದ್ರೆ ಒಟ್ಟು ಸಾಲದಲ್ಲಿ ಕೇವಲ 57.5 ಪರ್ಸೆಂಟ್​ನಷ್ಟು ಸಾಲವನ್ನು ಕೃಷಿ ಉದ್ದೇಶಗಳಿಗೆ ಪಡೆಯಲಾಗಿದೆ. ಉಳಿದ 52.5 ಪರ್ಸೆಂಟ್​ನಷ್ಟು ಸಾಲವನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಪಡೆಯಲಾಗಿದೆ ಅಂತ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ 2019ರ ಜನವರಿಯಿಂದ ಡಿಸೆಂಬರ್​ವರೆಗೆ ನಡೆಸಿದ ಸರ್ವೇಯಲ್ಲಿ ಗೊತ್ತಾಗಿದೆ.)

ಇನ್ನು ರೈತರನ್ನು ಬಿಟ್ಟು ಓವರ್​ಆಲ್​ ಆಗಿ ತಗೊಳ್ಳೋದಾದ್ರೆ, ಗ್ರಾಮೀಣ ಭಾಗದಲ್ಲಿ 35 ಪರ್ಸೆಂಟ್ ಕುಟುಂಬಗಳು ಸಾಲದಲ್ಲಿದ್ದು, ಆವರೇಜ್ ಸಾಲ 60 ಸಾವಿರ ಇದೆ. ಅದೇ ನಗರ ಭಾಗಗಳಲ್ಲಿ 22 ಪರ್ಸೆಂಟ್​ನಷ್ಟು ಕುಟುಂಬಗಳು ಸಾಲದಲ್ಲಿದ್ದು ಆವರೇಜ್ ಸಾಲ, 1.2 ಲಕ್ಷದವರೆಗೆ ಸಾಲ ಹೊಂದಿದ್ದಾರೆ. ಇನ್ನೂ ಒಂದು ವಿಚಾರ ಅಂದ್ರೆ ಗ್ರಾಮೀಣ ಭಾಗಗಳಲ್ಲಿ ಸಾಂಸ್ಥಿಕ ಮೂಲದ ಸಾಲ 66 ಪರ್ಸೆಂಟ್ ಇದ್ರೆ, ಸ್ಥಳೀಯ ಸಾಲ ಅಂದ್ರೆ ಕೈಸಾಲ 35 ಪರ್ಸೆಂಟ್ ಇದೆ. ಅದೇ ನಗರ ಭಾಗಗಳಲ್ಲಿ ಸಾಂಸ್ಥಿಕ ಅಂದ್ರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಂದ ನೀಡಲಾದ ಸಾಲ 87 ಪರ್ಸೆಂಟ್ ಇದ್ದು, ಕೈ ಸಾಲ ಸೇರಿದಂತೆ ಇತರೆ ಬರೀ 13 ಪರ್ಸೆಂಟ್ ಮಾತ್ರ ಇದೆ.

-masthmagaa.com

Contact Us for Advertisement

Leave a Reply