masthmagaa.com:

ಆಕ್ಸ್​ಫರ್ಡ್​-ಅಸ್ಟ್ರಾಝೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ವೃದ್ಧರಲ್ಲಿ ಬಲವಾದ ಮತ್ತು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತದೆ ಅಂತ ಮೂಲಗಳು ತಿಳಿಸಿವೆ. ಕೊರೋನಾಗೆ ಸಂಬಂಧಿಸಿದಂತೆ ವೃದ್ಧರನ್ನು ಹೈ ರಿಸ್ಕ್ ಅಥವಾ ತುಂಬಾ ಅಪಾಯಕ್ಕೆ ಒಳಗಾಗುವ ವರ್ಗ ಅಂತ ಪರಿಗಣಿಸಲಾಗಿದೆ. ಆದ್ರೀಗ ಆಕ್ಸ್​ಫರ್ಡ್-ಅಸ್ಟ್ರಾಝೆನೆಕಾ ಲಸಿಕೆ ವಯಸ್ಸಾದವರ ದೇಹದಲ್ಲೂ ಪ್ರಬಲವಾದ ಪ್ರತಿಕಾಯಗಳನ್ನ ಉತ್ಪಾದಿಸುತ್ತದೆ ಅನ್ನೋ ವಿಚಾರ ಗೊತ್ತಾಗಿದೆ.

ಈ ಲಸಿಕೆಯು ವಯಸ್ಸಾದವರ ದೇಹದಲ್ಲಿ ರಕ್ಷಣಾತ್ಮಕ ಪ್ರತಿಕಾಯಗಳು ಮತ್ತು ಟಿ-ಸೆಲ್​ಗಳನ್ನು ಪ್ರಚೋದಿಸುತ್ತದೆ ಅಂತ ಮೂಲಗಳು ತಿಳಿಸಿವೆ. ಈ ಬಗ್ಗೆ ಮತ್ತಷ್ಟು ವಿವರಗಳು ಶೀಘ್ರದಲ್ಲೇ ಕ್ಲಿನಿಕಲ್​ ಜರ್ನಲ್​ವೊಂದರಲ್ಲಿ ಪ್ರಕಟವಾಗಲಿದೆ. ಜುಲೈನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಲಸಿಕೆಯು 18ರಿಂದ 55 ವರ್ಷ ವಯಸ್ಸಿನ ಆರೋಗ್ಯವಂತ ವಯಸ್ಕರಲ್ಲಿ ಬಲವಾದ ರೋಗನಿರೋಧಕ ಶಕ್ತಿಯನ್ನು ರೂಪಿಸುತ್ತದೆ ಅನ್ನೋದನ್ನ ಹೇಳಲಾಗಿತ್ತು. ಇದೀಗ ವೃದ್ಧರಲ್ಲೂ ರೋಗ ನಿರೋಧಕ ಶಕ್ತಿ ರೂಪುಗೊಳ್ಳುವಲ್ಲಿ ಈ ಲಸಿಕೆ ಕೆಲಸ ಮಾಡುತ್ತೆ ಅಂತ ಹೇಳಲಾಗಿದೆ.

ಅಂದ್ಹಾಗೆ AZD1222 ಅಥವಾ ChAdOx1 nCoV-19 ಅಂತ ಕರೆಯಲ್ಪಡುವ ಈ ಲಸಿಕೆಯ ಕ್ಯಾಂಡಿಡೇಟ್​ನ್ನು ಬ್ರಿಟನ್​ನ್ ಆಕ್ಸ್​ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿದೆ. ಇದರ ಮಾನವ ಪ್ರಯೋಗ ಮತ್ತು ಉತ್ಪಾದನೆಯ ಲೈಸೆನ್ಸ್​ನ್ನ 2020ರ ಏಪ್ರಿಲ್​ನಲ್ಲಿ ಅಸ್ಟ್ರಾಝೆನೆಕಾ ಕಂಪನಿಗೆ ನೀಡಲಾಯ್ತು. ಈ ಲಸಿಕೆ ಮೇಲೆ ಬಹುತೇಕ ಎಲ್ಲಾ ದೇಶಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಆಕ್ಸ್​ಫರ್ಡ್ ಲಸಿಕೆ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದೆ.

-masthmagaa.com

Contact Us for Advertisement

Leave a Reply