masthmagaa.com:

ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು ಎಲ್ಲರಿಗೂ ಗೊತ್ತಿದೆ. ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ ಭಾರತ ಪಾಕ್​ ವಿರುದ್ಧ ಏರ್​ಸ್ಟ್ರೈಕ್ ಮಾಡಿತ್ತು. ಪಾಕ್​ ಗಡಿಯಲ್ಲಿದ್ದ ಉಗ್ರರ ಲಾಂಚ್​ಪ್ಯಾಡ್​ಗಳನ್ನ ಉಡೀಸ್ ಮಾಡಿತ್ತು. ಇದಾದ ಬಳಿಕ ಎರಡು ದೇಶಗಳ ನಡುವೆ ಯುದ್ಧವೇ ನಡೆದುಹೋಗಬಹುದು ಅನ್ನೋ ಪರಿಸ್ಥಿತಿ ಇತ್ತು. ಈ ಮಧ್ಯೆ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್​ರನ್ನು ಪಾಕ್ ಸೇನೆ ಸೆರೆ ಹಿಡಿದಿತ್ತು. ಇದೆಲ್ಲಾ ಹಳೇ ವಿಚಾರ. ಆದ್ರೀಗ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ. ಅದೇನಂದ್ರೆ, ವಿಂಗ್​ ಕಮಾಂಡರ್ ಅಭಿನಂದನ್​ರನ್ನ ಬಿಡುಗಡೆ ಮಾಡುವಂತೆ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಆಗ್ರಹಿಸಿದಾಗ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೆದ್​​ ಬಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಅನ್ನೋ ವಿಚಾರ ಗೊತ್ತಾಗಿದೆ. ಇದನ್ನ ಸ್ವತಃ ಪಾಕ್ ಸಂಸದ ಅಯಾಝ್ ಸಾದಿಕ್ ಹೇಳಿದ್ದಾರೆ.

‘ನನಗೆ ನೆನಪಿದೆ, ಅಭಿನಂನ್​ರನ್ನ​ ಸೆರೆ ಹಿಡಿದ ಬಳಿಕ ನಡೆದ ಸಭೆಗೆ ಜನರಲ್ ಬಜ್ವಾ ಬರುವಾಗ ಅವರು ಕಾಲುಗಳು ನಡುಗುತ್ತಿದ್ದವು, ಅವರು ಬೆವರುತ್ತಿದ್ದರು. ಈ ವೇಳೆ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅಭಿನಂದನ್​ರನ್ನ ಹೋಗಲು ಬಿಡು. ಇಲ್ಲದಿದ್ದರೆ ಪಾಕಿಸ್ತಾನದ ಮೇಲೆ ರಾತ್ರಿ 9 ಗಂಟೆಗೆ ಭಾರತ ದಾಳಿ ಮಾಡುವ ಸಾಧ್ಯತೆ ಇದೆ ಅಂತ ಹೇಳಿದ್ದರು’ ಅಂತ PML-N ಪಕ್ಷದ ಸಂಸದ ಅಯಾಝ್ ಸಾದಿಕ್ ಪಾಕ್ ಸಂಸತ್​ನಲ್ಲಿ ಹೇಳಿದ್ದಾರೆ. ಈ ಸಭೆಗೆ ಪ್ರಧಾನಿ ಇಮ್ರಾನ್​ ಖಾನ್ ಗೈರಾಗಿದ್ದರು ಅನ್ನೋದು ಕೂಡ ಗೊತ್ತಾಗಿದೆ. ಅಂದ್ಹಾಗೆ PML-N ಪಕ್ಷ ಭಾರತದ ಮೋದಿ ಸರ್ಕಾರದ ಪರವಾಗಿದೆ ಅಂತ ಪಾಕ್ ಸರ್ಕಾರ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಾದಿಕ್ ಈ ರೀತಿ ಹೇಳಿದ್ದಾರೆ. ಒಟ್ನಲ್ಲಿ ಭಾರತ ಮತ್ತು ಅಭಿನಂದನ್ ವಿಚಾರದಲ್ಲಿ ಪಾಕ್ ಸೇನಾ ಮುಖ್ಯಸ್ಥ ಗಢಗಢ ನಡುಗಿದ್ದಂತೂ ಸತ್ಯ ಅನ್ನೋದನ್ನ ಸ್ವತಃ ಪಾಕ್ ಒಪ್ಪಿಕೊಂಡಿದೆ.

ಇದರ ಬೆನ್ನಲ್ಲೇ ಅಂದು ಭಾರತದ ವಾಯುಪಡೆ ಮುಖ್ಯಸ್ಥರಾಗಿದ್ದ ಬಿ.ಎಸ್​. ಧನೋವಾ ಪ್ರತಿಕ್ರಿಯೆ ನೀಡಿದ್ದು, ‘ಅಂದು ಏನಾದ್ರೂ ಪಾಕ್ ನಮ್ಮ ಮೇಲೆ ದಾಳಿ ಮಾಡಿದ್ದರೆ ಅವರ ಫಾರ್ವರ್ಡ್​ ಪೋಸ್ಟ್​ಗಳನ್ನ ಉಡೀಸ್ ಮಾಡ್ತಿದ್ವಿ. ಭಾರತ ಅದಕ್ಕೆ ತಯಾರಾಗಿತ್ತು. ಆದ್ರೆ ಪೂರ್ಣ ಪ್ರಮಾಣದ ಯುದ್ಧ ಮಾಡಬೇಕೋ ಅಥವಾ ಮುಂಚೂಣಿ ನೆಲೆಗಳನ್ನ ಮಾತ್ರ ಹೊಡೆದುರಿಳಿಸಬೇಕೋ ಅನ್ನೋದು ಕೇಂದ್ರ ಸರ್ಕಾರಕ್ಕೆ ಬಿಟ್ಟಿತ್ತು. ನಮ್ಮ ಸಾಮರ್ಥ್ಯ ಏನು ಅನ್ನೋದು ಪಾಕಿಸ್ತಾನಕ್ಕೆ ತಿಳಿದಿದೆ. ಹೀಗಾಗಿಯೇ ಸುಮ್ಮನಾದ್ರು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply