ಸತತ 2ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

masthmagaa.com:

ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್​ ದರ ಪ್ರತಿ ಲೀಟರ್​ಗೆ 60 ಪೈಸೆ ಏರಿಕೆ ಕಂಡಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ಗೆ 71.86 ರೂಪಾಯಿಯಿಂದ 72.46 ರೂಪಾಯಿ ಆಗಿದೆ. ಡೀಸೆಲ್ ದರ 69.99 ರೂಪಾಯಿಯಿಂದ 70.59 ರೂಪಾಯಿ ಆಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು 83 ದಿನಗಳ ಅಂತರದ ಬಳಿಕ ದೈನಂದಿನ ಬೆಲೆ ಪರಿಷ್ಕರಣೆಗೆ ಮರಳಿದ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ಸತತ 2ನೇ ದಿನ ಹೆಚ್ಚಿಸಲಾಗಿದೆ. ಭಾನುವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ 60 ಪೈಸೆ ಹೆಚ್ಚಿಸಲಾಗಿತ್ತು.

ತೈಲ ಕಂಪನಿಗಳು ಆಗಾಗ ATF ಮತ್ತು LPG ದರವನ್ನು ಪರಿಷ್ಕರಿಸುತ್ತಿರುತ್ತವೆ. ಆದ್ರೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹಿನ್ನೆಲೆ ಮಾರ್ಚ್​ 16ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಿರಲಿಲ್ಲ.

-masthmagaa.com

Contact Us for Advertisement

Leave a Reply