masthmagaa.com:

ಇತ್ತೀಚೆಗಷ್ಟೇ ತಾವು ಅಭಿವೃದ್ಧಿ ಪಡಿಸಿದ ಲಸಿಕೆ 90%ಗೂ ಹೆಚ್ಚು ಪರಿಣಾಮಕಾರಿ ಅಂತ ಮಧ್ಯಂತರ ವರದಿ ನೀಡಿದ್ದ ಫೈಝರ್ (Pfizer) ಮತ್ತು ಬಯೋಎನ್​ಟೆಕ್ (BioNTech) ಕಂಪನಿ ಇದೀಗ ತಮ್ಮ ಲಸಿಕೆ 95% ಪರಿಣಾಮಕಾರಿ ಅಂತ ಘೋಷಿಸಿದೆ.  ಜೊತೆಗೆ ಎಲ್ಲಾ ಸೇಫ್ಟಿ ಚೆಕ್​ಗಳನ್ನ ಈ ಲಸಿಕೆ ಪಾಸ್ ಮಾಡಿದೆ. ಲಸಿಕೆಯನ್ನ 6 ದೇಶಗಳ ಸುಮಾರು 43,500 ಜನರ ಮೇಲೆ ಪ್ರಯೋಗ ಮಾಡಲಾಗಿದೆ. ಈ ವೇಳೆ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಅನ್ನೋದು ಕೂಡ ಗೊತ್ತಾಗಿದೆ ಅಂತ ಕಂಪನಿ ಹೇಳಿದೆ. ಶೀಘ್ರದಲ್ಲೇ ಫೈಝರ್ ಮತ್ತು ಬಯೋಎನ್​ಟೆಕ್ ಕಂಪನಿ ತಮ್ಮ ಲಸಿಕೆಗೆ ಅಮೆರಿಕ ಸರ್ಕಾರದಿಂದ ಅನುಮೋದನೆ ಪಡೆಯಲಿವೆ. ನಂತರ ಈ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಅಂತ ಹೇಳಲಾಗ್ತಿದೆ.

ಇತ್ತೀಚೆಗಷ್ಟೇ ಅಮೆರಿಕದ ಮೊಡೆರ್ನಾ ಕಂಪನಿ ತನ್ನ ಲಸಿಕೆ 94.5% ಪರಿಣಾಮಕಾರಿ ಅಂತ ಹೇಳಿತ್ತು. ಇದೀಗ ಫೈಝರ್ ಕಂಪನಿ ಅದಕ್ಕಿಂತ ಸ್ವಲ್ಪ ಜಾಸ್ತಿ 95% ಎಫೆಕ್ಟಿವ್ ಅಂತ ಘೋಷಿಸಿಕೊಂಡಿದೆ. ಅಂದ್ರೆ 95% ಪರಿಣಾಮಕಾರಿ, ಉಳಿದ 5% ಹೇಳಕ್ಕಾಗಲ್ಲ ಅಂತ. ರಷ್ಯಾದ ‘ಸ್ಪುಟ್ನಿಕ್-V’ ಲಸಿಕೆ 92% ಪರಿಣಾಮಕಾರಿ ಅಂತ ಕಂಪನಿ ಹೇಳಿಕೊಂಡಿದೆ. ಈ ಎಲ್ಲಾ ಲಸಿಕೆಗಳಲ್ಲಿ ಫೈಝರ್ ಕಂಪನಿಯ ಲಸಿಕೆ ಹೆಚ್ಚು ಪರಿಣಾಮಕಾರಿ ಅನ್ನೋ ರೀತಿ ಕಾಣ್ತಿದೆ. ಆದ್ರೆ ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಸೇರಿಕೊಂಡು ತಯಾರಿಸಿರುವ ಲಸಿಕೆ ಎಷ್ಟು ಪರಿಣಾಮಕಾರಿ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.

-masthmagaa.com

Contact Us for Advertisement

Leave a Reply