ಖಾಸಗಿ ವಲಯಕ್ಕೆ ಸಪೋರ್ಟ್​​​​ ಮಾಡಿ: ರಾಜ್ಯಗಳಿಗೆ ಮೋದಿ ಕರೆ

masthmagaa.com:

ದೆಹಲಿ: ಸರ್ಕಾರದ ಥಿಂಕ್ ಟ್ಯಾಂಕ್​​ ನೀತಿ ಆಯೋಗದ 6ನೇ ಸಭೆಯಲ್ಲಿ ಇವತ್ತು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗಿಯಾಗಿದ್ರು. ಇದ್ರಲ್ಲಿ ಎಲ್ಲಾ ರಾಜ್ಯಗಳ ಸಿಎಂಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್​ಗಳು ಕೂಡ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾದ ಹೊಡೆತದಿಂದ ದೇಶವನ್ನು ಮೇಲೆತ್ತಲು ಬಲಿಷ್ಠವಾದ ನೀತಿಗಳನ್ನು ರೂಪಿಸಬೇಕಾದ ಅಗತ್ಯತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಗ್ಗಟ್ಟು ತುಂಬಾ ಅನಿವಾರ್ಯ. ಕೊರೋನಾ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಿತ್ತು. ಇದ್ರಿಂದ ಇಡೀ ವಿಶ್ವಮಟ್ಟದಲ್ಲಿ ಭಾರತ ಒಳ್ಳೆಯ ಇಮೇಜ್ ಬಿಲ್ಡ್​ ಮಾಡಲು ಸಾಧ್ಯವಾಗಿತ್ತು. ಖಾಸಗಿ ವಲಯದ ಬೆಳವಣಿಗೆಗೆ ಅವಕಾಶ ನೀಡಬೇಕು. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಬೆಂಬಲ ನೀಡಬೇಕು ಅಂತ ಕರೆ ಕೊಟ್ಟಿದ್ದಾರೆ.

ನಾವು ಖಾಸಗಿ ವಲಯಕ್ಕೆ ಬೆಂಬಲ ನೀಡಿ.. ಅವಕಾಶಗಳನ್ನು ನೀಡಿ, ಆತ್ಮನಿರ್ಭರ್ ಭಾರತದಲ್ಲಿ ಭಾಗಿಯಾಗುವಂತೆ ಮಾಡಬೇಕು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply