masthmagaa.com:

ಪ್ರಧಾನಿ ಮೋದಿ ಬಳಿ ಇರುವ ಆಸ್ತಿ ಎಷ್ಟೆಂಬುದು ಬಯಲಾಗಿದೆ. ಅವರ ಬಳಿ ಈಗ 2.85 ಕೋಟಿ ರೂಪಾಯಿ ಮೌಲ್ಯದ ಆಸ್ತಿಇದೆ. ಇದು ಹೇಗೆ ಗೊತ್ತಾಯ್ತು ಅಂತೀರ.. ಇವರು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿರುವ ಆಸ್ತಿ ಮಾಹಿತಿಯಲ್ಲಿ ಇದು ರಿವೀಲ್ ಆಗಿದೆ. ಕಳೆದ ವರ್ಷ ಮೋದಿ ಬಳಿ ₹2.49 ಕೋಟಿಯಷ್ಟು ಆಸ್ತಿ ಇತ್ತು. ಅದು ಈಗ 36 ಲಕ್ಷದಷ್ಟು ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಮೋದಿಯವರು ಬ್ಯಾಂಕ್‌ನಲ್ಲಿ ಜಮಾವಣೆ ಮಾಡಿರುವ ಹಣದಿಂದ ಒಟ್ಟು ಮೂರೂವರೆ ಲಕ್ಷದಷ್ಟು ಹಣ ಬಡ್ಡಿ ರೂಪದಲ್ಲಿ ಬಂದಿದೆ. ಉಳಿದ 33 ಲಕ್ಷದಷ್ಟು ಹಣ ಇದ್ಯಲ್ವಾ ಇದು ಮೋದಿಯವರು ವಿವಿಧ ಕಡೆ ಹೂಡಿಕೆ ಮಾಡಿದ್ದಕ್ಕೆ ಬಂದಿರುವಂತಹ ಲಾಭವಾಗಿದೆ.

ಇನ್ನು ಪ್ರಧಾನಿ ಮೋದಿ ಯಾವುದೇ ಸಾಲ ಮಾಡಿಲ್ಲ. ಯಾವುದೇ ವೈಯಕ್ತಿಕ ವಾಹನ ಇವರ ಬಳಿ ಇಲ್ಲ ಅಂತ ಘೋಷಿಸಿಕೊಂಡಿದ್ದಾರೆ. ಪ್ರಧಾನಿ ಬಳಿ ಇರುವ ಚಿನ್ನದ ವಿಚಾರಕ್ಕೆ ಬಂದರೆ, 45 ಗ್ರಾಂ ತೂಕವಿರುವ ನಾಲ್ಕು ಚಿನ್ನದ ಉಂಗುರಗಳಿವೆ. ಇದರ ಬೆಲೆ ಒಂದೂವರೆ ಲಕ್ಷ ರೂಪಾಯಿ ಅಂತ ಅಂದಾಜಿಸಲಾಗಿದೆ.

ಮೋದಿಯವರ ಅತ್ಯಾಪ್ತ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಆಸ್ತಿಯ ವಿವರವನ್ನ ನೋಡೋದಾದ್ರೆ, ಇವರ ಆಸ್ತಿ ₹3.67 ಕೋಟಿಯಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಇವರ ಬಳಿ ₹32.5 ಕೋಟಿಯಷ್ಟು ಆಸ್ತಿ ಇತ್ತು. ಈ ಬಾರಿ ಅದು 28.63 ಕೋಟಿಗೆ ಇಳಿದಿದೆ. ಇದಕ್ಕೆ ಕಾರಣ ಅಮಿತ್ ಶಾ ಅವ್ರು ತಮ್ಮ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರು. ಷೇರು ಮಾರುಕಟ್ಟೆ ಬಿದ್ದಕಾರಣ ಅಮಿತ್ ಶಾ ಅವರ ಆಸ್ತಿ ಮೌಲ್ಯ ಕೂಡ ಕುಸಿದಿದೆ.

-masthmagaa.com

Contact Us for Advertisement

Leave a Reply