ಕೊರೋನಾ ಲಸಿಕೆ ಘಟಕಗಳಿಗೆ ಹೋಗ್ತಿರೋದ್ಯಾಕೆ ಪ್ರಧಾನಿ ಮೋದಿ..?

masthmagaa.com:

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ಭಾರತದ ಪ್ರಮುಖ ಕೊರೋನಾ ಲಸಿಕೆಯ ಘಟಕಗಳಿಗೆ ಭೇಟಿ ನೀಡುತ್ತಿದ್ದು, ಕೊರೋನಾ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಕ್ರಿಯೆಯನ್ನು ಪರಿಶೀಲಿಸಲಿದ್ದಾರೆ.  ಈಗಾಗಲೇ ಗುಜರಾತ್​​ ಅಹ್ಮದಾಬಾದ್​​ಗೆ ತೆರಳಿರುವ ಪ್ರಧಾನಿ ನರೇಂದ್ರ ಜೈಡಸ್ ಬಯೋಟೆಕ್ ಪಾರ್ಕ್​​​​ಗೆ ಭೇಟಿ ನೀಡಿದ್ದಾರೆ. ನಂತರ ಮಧ್ಯಾಹ್ನ ಪುಣೆಯ ಸೇರಂ ಇನ್​ಸ್ಟಿಟ್ಯೂಟ್ ಮತ್ತು ಸಂಜೆ ಹೈದ್ರಾಬಾದ್​​ನಲ್ಲಿರೋ ಭಾರತ್ ಬಯೋಟೆಕ್​​​ಗೆ ಭೇಟಿ ನೀಡಲಿದ್ಧಾರೆ. ಈ ವೇಳೆ ಪ್ರಧಾನಿ ಮೋದಿಯವರು ಈ ಲಸಿಕೆ ಕೇಂದ್ರಗಳ ತಜ್ಞರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದ್ರಿಂದ ದೇಶದ ಜನತೆಗೆ ಲಸಿಕೆ ವಿತರಣೆಗೆ ಮಾಡಿಕೊಂಡಿರೋ ಸಿದ್ಧತೆ, ಅದಕ್ಕಿರುವ ಸವಾಲುಗಳು ಮತ್ತು ಅಗತ್ಯವಿರುವ ರೋಡ್​​ಮ್ಯಾಪ್​​ ರೆಡಿ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಅಂದ್ಹಾಗೆ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಆಕ್ಸ್​ಫರ್ಡ್​ ಮತ್ತು ಆಸ್ಟ್ರಾಝೆನೆಕಾ ಜೊತೆಗೆ ಸೇರಿಕೊಂಡು ‘ಕೋವಿಶೀಲ್ಡ್’ ಲಸಿಕೆಯನ್ನ ಉತ್ಪಾದಿಸುತ್ತಿದೆ. ಭಾರತ್​ ಬಯೋಟೆಕ್​ ಕಂಪನಿ ಐಸಿಎಂಆರ್ ಜೊತೆ ಸೇರಿಕೊಂಡು ‘ಕೋವಾಕ್ಸಿನ್’ ಲಸಿಕೆ ಹಾಗೂ ಝೈಡಸ್ ಕ್ಯಾಡಿಲಾ ಕಂಪನಿ ‘ZyCoV-D’ ಎಂಬ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.

-masthmagaa.com

Contact Us for Advertisement

Leave a Reply