ವೇಗ ಪಡೆದ ಕೊರೋನಾ.. ಸಿಎಂಗಳ ಜೊತೆ ನಾಳೆ ಮೋದಿ ಮಾತುಕತೆ..!

masthmagaa.com:

ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಮತ್ತೊಮ್ಮೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ದೇಶದಲ್ಲಿ ಲಾಕ್​ಡೌನ್​ ಘೋಷಣೆಯಾದ ಬಳಿಕ 5ನೇ ಬಾರಿ ನಡೆಯುತ್ತಿರುವ ವಿಡಿಯೋ ಕಾನ್ಫರೆನ್ಸ್ ಇದಾಗಿದೆ.

ದೇಶದಲ್ಲಿ 3ನೇ ಹಂತದ ಲಾಕ್​ಡೌನ್ ಮುಗಿಯಲು ಒಂದು ವಾರ ಬಾಕಿ ಇರುವಾಗಲೇ ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿರೋದು ಸಾಕಷ್ಟು ಮಹತ್ವ ಪಡೆದಿದೆ. ಇದರ ಬಗ್ಗೆಯೇ ಎಲ್ಲಾ ರಾಜ್ಯಗಳ ಸಿಎಂ ಜೊತೆಗೆ ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದಾರೆ ಅಂತ ಮೂಲಗಳು ಹೇಳಿವೆ.

ಇನ್ನು ಹಲವು ರಾಜ್ಯಗಳು ಕೇಂದ್ರ ಸರ್ಕಾರದ ರೆಡ್, ಆರೆಂಜ್ ಮತ್ತು ಗ್ರೀನ್​ ಜೋನ್​ಗಳ ಪಟ್ಟಿಗೆ ವಿರೋಧ ವ್ಯಕ್ತಪಡಿಸಿವೆ ಅಂತ ಹೇಳಲಾಗಿದೆ. ಅದ್ರಲ್ಲೂ ವಲಸೆ ಕಾರ್ಮಿಕರ ಆಗಮನದಿಂದ ಕೆಲ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆ ಜಿಲ್ಲೆಗಳು ಕೂಡ ರೆಡ್​ ಜೋನ್ ವ್ಯಾಪ್ತಿಗೆ ಬರುವ ಆತಂಕ ರಾಜ್ಯಗಳಿಗಿವೆ.

-masthmagaa.com

Contact Us for Advertisement

Leave a Reply