masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತಾವಿನ್ನೂ ಸ್ಪುಟ್ನಿಕ್-V ಲಸಿಕೆಯನ್ನ ಹಾಕಿಸಿಕೊಂಡಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ರಷ್ಯಾ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ. ಹೀಗಾಗಿ ಎಲ್ಲಾ ರಷ್ಯನ್ನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು. ನಾನು ಕೂಡ ಸಮಯ ಬಂದಾಗ ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ. ಇದೇ ವೇಳೆ ರಷ್ಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಉಪಕರಣಗಳ ಕೊರತೆ ಇದೆ ಅನ್ನೋದನ್ನ ಕೂಡ ವಾರ್ಷಿಕ ಸುದ್ದಿಗೋಷ್ಠಿ ಕಾರ್ಯಕ್ರಮದಲ್ಲಿ ಪುಟಿನ್ ಒಪ್ಪಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply