ಜಿಡಿಪಿ ಕುಸಿತಕ್ಕೆ ಕಾರಣವೇನು..? ರಾಹುಲ್ ಗಾಂಧಿ ಹೇಳಿದ್ದೇನು..?

masthmagaa.com:

ದೆಹಲಿ: ಜಿಡಿಪಿ ಕುಸಿತದ ವಿಚಾರವಾಗಿ ಮತ್ತೊಮ್ಮೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಡಿಪಿ ಕುಸಿತಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದಿರುವ ರಾಹುಲ್ ಗಾಂಧಿ, ಜಿಎಸ್​ಟಿ ವಿಚಾರವಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ . ಕೇಂದ್ರ ಸರ್ಕಾರ ಸರಿಯಾಗಿ ಜಿಎಸ್​ಟಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಜಿಎಸ್​ಟಿಯಲ್ಲಿ 4 ರೀತಿಯ ಸ್ಲ್ಯಾಬ್​​ಗಳಿರೋದೇ ಒಂದು ತಪ್ಪು ನಿರ್ಧಾರ. ಜಿಎಸ್​ಟಿ ವಿಫಲವಾಗಿದ್ದು ಕೂಡ ಜಿಡಿಪಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಕೇಂದ್ರ ಸರ್ಕಾರ ಜಿಎಸ್​ಟಿ ಮೂಲಕ ದೇಶದ ಬೆನ್ನೆಲುಬಿನಂತಿದ್ದ ವರ್ಗದ ಮೇಲೆ ದಾಳಿ ನಡೆಸಿದೆ ಅಂತ ಟೀಕಿಸಿದ್ದಾರೆ.

ಜಿಎಸ್​ಟಿಯನ್ನು ಮತ್ತೊಮ್ಮೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದಿರುವ ರಾಹುಲ್ ಗಾಂಧಿ, ಜಿಎಸ್​ಟಿಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದೇ ಇದ್ದಿದ್ದರಿಂದ ಲಕ್ಷಾಂತರ ಸಣ್ಣ ಉದ್ಯಮಗಳು ನಷ್ಟವಾದವು. ರಾಜ್ಯಗಳಿಗೂ ಕೂಡ ಕೇಂದ್ರ ಸರ್ಕಾರ ಜಿಎಸ್​ಟಿಯ ಹಣ ಪಾವತಿಸುತ್ತಿಲ್ಲ.. ಇದು ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯ ಎಂದಿದ್ದಾರೆ.

-masthmagaa.com

Contact Us for Advertisement

Leave a Reply