ಇಂಧನ ಬೆಲೆ ಏರಿಕೆ! ಕೇಂದ್ರದ ಮೇಲೆ ಮುಗಿಬಿದ್ದ ರಾಹುಲ್!

masthmagaa.com:

ದೆಹಲಿ: ಕೇಂದ್ರ ಬಜೆಟ್ ಮತ್ತು ರೈತರ ಪ್ರತಿಭಟನೆ ವಿಚಾರವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಪೆಟ್ರೋಲ್- ಡೀಸೆಲ್ ಮತ್ತು ಗಗನಕ್ಕೇರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆ ವಿಚಾರವಾಗಿ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕೆಂಡಕಾರಿದ್ದಾರೆ. ಟ್ವಿಟ್ಟರ್​ನಲ್ಲಿ ಇಂಧನ ಬೆಲೆ ಏರಿಕೆಯ ಸುದ್ದಿ ಶೇರ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ದೇಶ ಮತ್ತು ಮನೆಯ ಬಜೆಟ್​ನ್ನು ಅಸ್ತವ್ಯಸ್ಥಗೊಳಿಸಿದೆ ಅಂತ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಮತ್ತೊಂದು ಟ್ವೀಟ್​​ನಲ್ಲಿ ಕೃಷಿ ಕಾನೂನುಗಳ ಬಗ್ಗೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, ಕೇಂದ್ರದ 3 ಕೃಷಿ ಕಾನೂನುಗಳು ಕೇವಲ ರೈತರು ಮತ್ತು ಕಾರ್ಮಿಕರು ಮಾತ್ರವಲ್ಲ.. ದೇಶಕ್ಕೇ ಹಾನಿಕರ ಅಂತ ಹೇಳಿದ್ದಾರೆ.

ಅಂದಹಾಗೆ ಬೆಂಗಳೂರಿನಲ್ಲಿಂದು ಪ್ರತಿಲೀಟರ್ ಪೆಟ್ರೋಲ್ ಬೆಲೆ 89.85 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್​​ಗೆ 81.76 ರೂ. ಇದೆ.

-masthmagaa.com

Contact Us for Advertisement

Leave a Reply