ಮೇ 3ರ ನಂತರವೂ ಭಾರತದಲ್ಲಿ ವಿಮಾನ ಹಾರಲ್ಲ..ರೈಲು ಓಡಲ್ಲ..!

masthmagaa.com:

ದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹೇರಿರುವ ಲಾಕ್​ಡೌನ್ ಮೇ 3ರಂದು ಮುಗಿಯಲಿದೆ. ಆದ್ರೆ ಮೇ 3ರ ನಂತರವೂ ವಿಮಾನಯಾನ ಮತ್ತು ರೈಲ್ವೆ ಸೇವೆ ಆರಂಭವಾಗೋದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಕೋವಿಡ್-19 ಮೇಲ್ವಿಚಾರಣೆಗೆ ರಕ್ಷಣಾ ಸಚಿವ ರಾಜ​ನಾಥ್ ಸಿಂಗ್ ನೇತೃತ್ವದಲ್ಲಿ ಒಂದು ಸಚಿವರ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿ ನಿನ್ನೆ 5ನೇ ಸಭೆ ನಡೆಸಿದೆ. ಅಲ್ಲದೆ ಕೆಲವೊಂದು ವಿಚಾರಗಳ ಕುರಿತು ವರದಿ ಸಿದ್ಧಪಡಿಸಿ ಪ್ರಧಾನಿ ಮೋದಿಯವರಿಗೆ ಕಳುಹಿಸಿದೆ. ಇದರಲ್ಲಿ ಮೇ 3ರ ನಂತರವೂ ವಿಮಾನಯಾನ ಮತ್ತು ರೈಲ್ವೆ ಸೇವೆ ಆರಂಭಿಸೋದು ಬೇಡ ಎಂದು ತಿಳಿಸಲಾಗಿದೆ. ಆದ್ರೆ ಅಂತಿಮವಾಗಿ ಆರೋಗ್ಯ ಸಚಿವಾಲಯ ಮತ್ತು ಪ್ರಧಾನಿ ಮೋದಿಯವರು ಪರಿಸ್ಥಿತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಅಂತಲೂ ಸಭೆಯಲ್ಲಿ ಚರ್ಚಿಸಲಾಗಿದೆ.

ಆದ್ರೆ ರಾಜನಾಥ್ ಸಿಂಗ್ ನೇತೃತ್ವದ ಈ ಸಮಿತಿ ವಿಮಾನಯಾನ ಮತ್ತು ರೈಲ್ವೆ ಸೇವೆ ಆರಂಭಿಸೋದಕ್ಕೆ ವಿರುದ್ಧವಾಗಿದೆ. ಯಾಕಂದ್ರೆ ರೈಲುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಅಷ್ಟು ಸುಲಭವಲ್ಲ ಅನ್ನೋದು ಈ ಸಮಿತಿಯ ಅಭಿಪ್ರಾಯವಾಗಿದೆ. ಅಲ್ಲದೆ ಮೇ 3ರ ನಂತರದ ಪ್ರಯಾಣಕ್ಕೂ ಬುಕ್ಕಿಂಗ್ ಮಾಡಲು ಅವಕಾಶ ನೀಡಬೇಡಿ ಎಂದು ಏರ್​ ಇಂಡಿಯಾ ಮತ್ತು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply