ಪಟಾಕಿ ಮಾಡಿದ್ರೆ 10 ಸಾವಿರ, ಸಿಡಿಸಿದ್ರೆ 2 ಸಾವಿರ ರೂ. ದಂಡ..!

masthmagaa.com:

ರಾಜಸ್ಥಾನ: ರಾಜ್ಯದಲ್ಲಿ ಪಟಾಕಿ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ಹಸಿರು ಪಟಾಕಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಅತ್ತ ರಾಜಸ್ಥಾನದಲ್ಲೂ ಕೂಡ ಪಟಾಕಿ ಬ್ಯಾನ್ ಮಾಡಲಾಗಿದೆ. ಅಷ್ಟೇ ಅಲ್ಲ.. ಪಟಾಕಿ ಮಾರಿ ಅಥವಾ ಪಟಾಕಿ ಸಿಡಿಸಿ ಸಿಕ್ಕಿಬಿದ್ರೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಪಟಾಕಿ ಮಾರುವಾಗ ಸಿಕ್ಕಿಬಿದ್ರೆ 10 ಸಾವಿರ ರೂಪಾಯಿ, ಪಟಾಕಿ ಸಿಡಿಸುವಾಗ ಸಿಕ್ಕಿಬಿದ್ರೆ 2 ಸಾವಿರ ರೂಪಾಯಿ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಅಶೋಕ್ ಗೆಹ್ಲೋಟ್​​, ರಾಜ್ಯದ ಜನತೆ ಇಂದು ಈವರೆಗೆ ಪಟಾಕಿ ಸಿಡಿಸದೇ ಹಬ್ಬವನ್ನು ಆಚರಿಸಿದ್ದೀರಿ.. ಇಂದು ರಾತ್ರಿ ಕೂಡ ಪಟಾಕಿ ಸಿಡಿಸೋದಿಲ್ಲ ಅಂತ ನಂಬಿದ್ದೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply