masthmagaa.com:

ರಷ್ಯಾದ ‘ಸ್ಪುಟ್ನಿಕ್​-V’ ಕೊರೋನಾ ಲಸಿಕೆಯ ಮೊದಲ ಬ್ಯಾಚ್ ಮುಂದಿನ ವಾರ ಉತ್ತರಪ್ರದೇಶದ ಕಾನ್ಪುರಕ್ಕೆ ಬರಲಿದೆ. ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ಮೆಡಿಕಲ್ ಕಾಲೇಜಿನಲ್ಲಿ ಅದರ 2 ಮತ್ತು 3ನೇ ಹಂತದ ಮಾನವ ಪ್ರಯೋಗ ನಡೆಯಲಿದೆ ಅಂತ ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಕಮಲ್ ಹೇಳಿದ್ದಾರೆ. ಮಾನವ ಪ್ರಯೋಗಕ್ಕಾಗಿ ಈಗಾಗಲೇ 180 ಸ್ವಯಂಸೇವಕರನ್ನ ನೇಮಿಸಿಕೊಳ್ಳಲಾಗಿದೆ. ಸ್ವಯಂ ಸೇವಕರಿಗೆ ಒಂದು ಡೋಸ್ ಲಸಿಕೆ ನೀಡಿ ಪರೀಕ್ಷಿಸಲಾಗುತ್ತದೆ. ಅವಶ್ಯಕತೆಬಿದ್ದರೆ ಹೆಚ್ಚು ಡೋಸ್​ಗಳನ್ನ ನೀಡಲಾಗುತ್ತದೆ. ಬಳಿಕ ಬಂದ ಫಲಿತಾಂಶನಿಂದ ರಷ್ಯಾ ಲಸಿಕೆ ಯಶಸ್ವಿಯೋ ಅಥವಾ ಇಲ್ಲವೋ ಅನ್ನೋದನ್ನ ನಿರ್ಧರಿಸಲಾಗುತ್ತದೆ ಅಂತ ಹೇಳಿದ್ದಾರೆ.

ಅಂದ್ಹಾಗೆ ರಷ್ಯಾ ಲಸಿಕೆಯ ಮಾನವ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ಅನುಮತಿ ನೀಡಿದೆ. ದೇಶದಲ್ಲಿ ‘ಸ್ಪುಟ್ನಿಕ್-V’ ಲಸಿಕೆಯ ಪೂರೈಕೆ ಮತ್ತು ಮಾನವ ಪ್ರಯೋಗವನ್ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ನೋಡಿಕೊಳ್ಳುತ್ತದೆ. ಈ ಕಂಪನಿಯು ರಷ್ಯನ್ ಡೈರೆಕ್ಟ್​ ಇನ್ವೆಸ್ಟ್​ಮೆಂಟ್ ಫಂಡ್ (RDIF) ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಮಾನವ ಪ್ರಯೋಗದ ಬಳಿಕ ಭಾರತ ಸರ್ಕಾರವೇನಾದ್ರೂ ಲಸಿಕೆಗೆ ಅನುಮೋದನೆ ಕೊಟ್ಟರೆ ಭಾರತಕ್ಕೆ 10 ಕೋಟಿ ‘ಸ್ಪುಟ್ನಿಕ್-V’ ಡೋಸ್​ಗಳನ್ನ RDIF ಪೂರೈಕೆ ಮಾಡಲಿದೆ. ಇತ್ತೀಚೆಗಷ್ಟೇ ಈ ಲಸಿಕೆಯು 92% ಸುರಕ್ಷಿತ ಅಂತ ಕಂಪನಿಯೇ ಘೋಷಿಸಿತ್ತು. ಹೀಗಾಗಿ ಈ ಲಸಿಕೆ ಮತ್ತು ಭಾರತದಲ್ಲಿ ಇದರ ಮಾನವ ಪ್ರಯೋಗ ಸಾಕಷ್ಟು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply