masthmagaa.com:

ಕೊರೋನಾ ವೈರಸ್​ಗೆ ‘ಸ್ಪುಟ್ನಿಕ್​-V’ ಲಸಿಕೆ ಅಭಿವೃದ್ಧಿಪಡಿಸಿರುವ ರಷ್ಯಾ ಇದೀಗ ಮತ್ತೊಂದು ಲಸಿಕೆಯ ಮಾನವ ಪ್ರಯೋಗಕ್ಕೆ ಪ್ಲಾನ್ ಮಾಡ್ತಿದೆ. ಇದರ ಹೆಸರು ‘ಎಪಿವ್ಯಾಕ್​ಕೊರೋನಾ’ (EpiVacCorona) ಅಂತ. ಈ ಲಸಿಕೆಯನ್ನ ಸೈಬಿರಿಯಾದ ವೆಕ್ಟರ್​ ಇನ್​ಸ್ಟಿಟ್ಯೂಟ್​ ಅಭಿವೃದ್ಧಿಪಡಿಸಿದೆ. 18 ವರ್ಷ ಮೇಲ್ಪಟ್ಟ 3,000 ಸ್ವಯಂಸೇವಕರು ಮತ್ತು 60 ವರ್ಷ ಮೇಲ್ಪಟ್ಟ 150 ಸ್ವಯಂಸೇವಕರ ಮೇಲೆ ಈ ಲಸಿಕೆಯ ಪ್ರಯೋಗ ನಡೆಸಲು ರಷ್ಯಾ ಸರ್ಕಾರ ಅನುಮತಿ ಕೊಟ್ಟಿದೆ. ರಷ್ಯಾದಲ್ಲಿ ಸೆಪ್ಟೆಂಬರ್​ನಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲೇ ಎರಡನೇ ಲಸಿಕೆಯ ಮಾನವ ಪ್ರಯೋಗಕ್ಕೆ ಮುಂದಾಗಿರೋದು ಗಮನಾರ್ಹ. ರಷ್ಯಾದ ಮೊದಲ ಲಸಿಕೆಯಾಗಿರುವ ‘ಸ್ಪುಟ್ನಿಕ್​-V’ ಶೇ. 92ರಷ್ಟು ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಣೆ ಮಾಡಿತ್ತು.

-masthmagaa.com

Contact Us for Advertisement

Leave a Reply