ರಷ್ಯಾ ಪ್ರಧಾನಿಗೂ ಅಂಟಿದ ಮಹಾಮಾರಿ ಕೊರೋನಾ..!

masthmagaa.com:

ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೂ ಕೊರೋನಾ ಮಹಾಮಾರಿ ತಗುಲಿದೆ. ನಿನ್ನೆ ಈ ಬಗ್ಗೆ ಮಿಖಾಯಿಲ್ ಮಿಶುಸ್ಟಿನ್ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಸಭೆ ನಡೆಸಿದ ಅವರು, ನನ್ನ ಸಹೋದ್ಯೋಗಿಗಳ ಆರೋಗ್ಯ ಕಾಪಾಡಲು ಸೆಲ್ಫ್​ ಅಬ್ಸರ್ವೇಷನ್​​​​ಗೆ ತೆರಳುತ್ತಿದ್ದೇನೆ. ಸದ್ಯ ನನ್ನನ್ನು ಪ್ರಧಾನಿ ಹುದ್ದೆಯಿಂದ ದೂರ ಇಟ್ಟು, ಆಂಡ್ರೆ ಬೆಲುಸೋವ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನಿಯೋಜಿಸುವಂತೆ ಮನವಿ ಮಾಡಿದ್ದರು.

ಅದರಂತೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಆಂಡ್ರೆ ಬೆಲುಸೋವ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಿ, ಆದೇಶ ಪ್ರತಿಗೆ ಸಹಿ ಹಾಕಿದ್ದಾರೆ. ಸದ್ಯ ಮಿಖಾಯಿಲ್ ಮಿಶುಸ್ಟಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಷ್ಯಾದಲ್ಲಿ ಈಗಾಗಲೇ 1,06,498 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 1,073 ಮಂದಿ ಸಾವನ್ನಪ್ಪಿದ್ದಾರೆ.

masthmagaa.com

Contact Us for Advertisement

Leave a Reply