2 ನಿರ್ಧಾರದಿಂದ ವಿಶ್ವಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಸೌದಿ..!

masthmagaa.com:

ಸೌದಿ ಅರೇಬಿಯಾ 2 ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಅಪ್ರಾಪ್ತ ಬಾಲಕರಿಗೆ ಮರಣದಂಡನೆ ಮತ್ತು ಅಪರಾಧಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಚಾಟಿಯಿಂದ ಹೊಡೆಯೋ ಶಿಕ್ಷೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸೌದಿಯ ರೆಕಾರ್ಡ್ ತುಂಬಾ ಕೆಟ್ಟದ್ದಾಗಿದೆ. ಆದ್ರೆ ಇತ್ತೀಚೆಗೆ ಪ್ರಿನ್ಸ್​ ಮೊಹ್ಮದ್ ಬಿಲ್ ಸಲ್ಮಾನ್ ಸೌದಿಯ ವರ್ಚಸ್ಸು ಹೆಚ್ಚಿಸಲು ಒಂದರ ನಂತರ ಒಂದು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿ ಮಾನವಹಕ್ಕು ಆಯೋಗದ ಅಧ್ಯಕ್ಷ ಅವಾದ್ ಅಲ್ವದ್​, ಇನ್ಮುಂದೆ ಅಪ್ರಾಪ್ತರು ಅಪರಾಧವೆಸಗಿದ್ರೆ ಅವರಿಗೆ ಮರಣ ದಂಡನೆ ವಿಧಿಸುವುದಿಲ್ಲ, ಬದಲಾಗಿ ಬಾಲಾಪರಾಧಿಗಳ ಕೇಂದ್ರ ನಿರ್ಮಿಸಿ, ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತೆ… ಈ ದಿನ ಸೌದಿಗೆ ತುಂಬಾ ಮಹತ್ವದ ದಿನವಾಗಿದೆ ಅಂತ ಹೇಳಿದ್ದಾರೆ.

ಶಿಕ್ಷೆ ನೀಡೋದ್ರಲ್ಲಿ ಸೌದಿ ಅರೇಬಿಯಾ ವಿಶ್ವದಲ್ಲೇ ಮುಂದಿನ ಸಾಲಿನಲ್ಲಿದೆ. ಇಲ್ಲಿ ಭಯೋತ್ಪಾದನೆ, ಅತ್ಯಾಚಾರ, ದರೋಡೆ, ಡ್ರಗ್ಸ್ ರಾಕೆಟ್ ಸೇರಿದಂತೆ ಹಲವು ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತೆ. 2019ರಲ್ಲಿ ಇಲ್ಲಿ 187 ಮಂದಿಗೆ ಮರಣ ದಂಡನೆ ವಿಧಿಸಲಾಗಿತ್ತು. ಈ ವರ್ಷ ಕೂಡ ಜನವರಿಯಿಂದ ಈವರೆಗೆ 12 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

-masthmagaa.com;

Contact Us for Advertisement

Leave a Reply